Daily Horoscope

Select Your Language

Notifications

webdunia
webdunia
webdunia
webdunia

ಚಿತ್ರಮಂದಿರಕ್ಕೂ 100 ಶೇ. ಅನುಮತಿ ನೀಡಲು ಶಿವರಾಜ್ ಕುಮಾರ್ ಆಗ್ರಹ

ಶಿವರಾಜ್ ಕುಮಾರ್
ಬೆಂಗಳೂರು: ಲಾಕ್ ಡೌನ್ ಬಳಿಕ ಎಲ್ಲಾ ರಂಗಕ್ಕೂ ಎಂದಿನ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡಲಾಗಿಲ್ಲ.


ಇದೀಗ ಚಿತ್ರಮಂದಿರ ಸಂಪೂರ್ಣ ತೆರೆಯಲು ಸರ್ಕಾರಕ್ಕೆ ನಟ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಶಿವಣ್ಣ ಚಿತ್ರಮಂದಿಕ್ಕೂ ಸಂಪೂರ್ಣ ಅವಕಾಶ ನೀಡಲಿ ಎಂದು ಆಗ್ರಹಿಸಿದ್ದಾರೆ.

ಎಲ್ಲಾ ರಂಗಕ್ಕೂ ಅನುಮತಿ ನೀಡಲಾಗಿದೆ. ಚಿತ್ರಮಂದಿರಗಳಿಗೆ ಮಾತ್ರ ಯಾಕಿಲ್ಲ? ಇದರಿಂದ ಎಲ್ಲಾ ಚಿತ್ರಗಳಿಗೂ ಒಳಿತಾಗುತ್ತದೆ. ಖಂಡಿತಾ ನಾವು ಕೇಳುತ್ತೇವೆ. ನಮಗೂ ಸಂಪೂರ್ಣ ಅವಕಾಶ ಸಿಗಲಿ ಎಂದು ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶುಗರ್ ಲೆಸ್ ಹಾಡು ಕೇಳಲು ರೆಡಿಯಾಗಿ