Select Your Language

Notifications

webdunia
webdunia
webdunia
webdunia

ಅತಂತ್ರ ಸ್ಥಿತಿಗೆ ತಲುಪಿದ ಸ್ಟಾರ್ ಸಿನಿಮಾಗಳು

ಸ್ಯಾಂಡಲ್ ವುಡ್
ಬೆಂಗಳೂರು: ಲಾಕ್ ಡೌನ್ ಮುಗಿದು ಇಷ್ಟು ದಿನವಾದ ಮೇಲೂ ಸರ್ಕಾರ ಹೆಚ್ಚಿನವುಗಳಿಗೆ ವಿನಾಯ್ತಿ ನೀಡಿದರೂ ಚಿತ್ರರಂಗಕ್ಕೆ ಮಾತ್ರ ವಿನಾಯ್ತಿ ನೀಡುವ ಮೂಡ್ ನಲ್ಲಿ ಇಲ್ಲ.


ಮತ್ತೆ ಚಿತ್ರಮಂದಿರಕ್ಕೆ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡದೇ ಇರಲು ಸರ್ಕಾರ ನಿರ್ಧರಿಸಿರುವುದು ಸ್ಟಾರ್ ಸಿನಿಮಾಗಳನ್ನು ಅತಂತ್ರ ಸ್ಥಿತಿಗೆ ತಲುಪಿಸಿದೆ.

ದುನಿಯಾ ವಿಜಯ್ ಅಭಿನಯದ ‘ಸಲಗ’, ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’, ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾಗಳು ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಕುಳಿತಿದೆ. ಆದರೆ ಸರ್ಕಾರ ಇನ್ನೂ 100 ಶೇಕಡಾ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡದೇ ಇರುವುದು ಈ ಚಿತ್ರಗಳ ಮೇಲೆ ಹೊಡೆತ ಬೀಳಲಿದೆ. ಅಲ್ಲದೆ, ಇನ್ನೂ ರಿಲೀಸ್ ಡೇಟ್ ಅನೌನ್ಸ್ ಮಾಡದೇ ಇರುವ ಕೋಟಿಗೊಬ್ಬ 3, ಕೆಜಿಎಫ್ 2 ಸಿನಿಮಾಗಳ ಬಿಡುಗಡೆ ಇನ್ನೂ ಮುಂದಕ್ಕೆ ಹೋಗಲಿದೆ. ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೆಷಲ್ ಡೇ ಬಗ್ಗೆ ಸ್ಪೆಷಲ್ ಆಗಿ ಹೇಳಿಕೊಂಡ ರಾಧಿಕಾ ಪಂಡಿತ್