Publish Date: Mon, 16 Aug 2021 (09:22 IST)
Updated Date: Mon, 16 Aug 2021 (09:24 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಹಾಡಿನ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಆದರೆ ಈ ಬಾರಿ ತೀರ್ಪುಗಾರರ ಸೀಟ್ ನಲ್ಲಿ ಕೂರುವವರು ಯಾರು ಎಂಬುದೇ ಎಲ್ಲರ ಕುತೂಹಲವಾಗಿದೆ.
ಇಷ್ಟು ಸೀಸನ್ ಗಳಲ್ಲಿಯೂ ಗಾಯಕ ರಾಜೇಶ್ ಕೃಷ್ಣನ್ ತಪ್ಪದೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ರಾಜೇಶ್ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಸ್. ಪಿ. ಬಾಲಸುಬ್ರಮಣ್ಯಂ ಸ್ಮರಣಾರ್ಥ ಎದೆ ತುಂಬಿ ಹಾಡುವೆನು ಶೋ ತೀರ್ಪುಗಾರರಾಗಿದ್ದಾರೆ.
ಹೀಗಾಗಿ ಅವರು ಸರಿಗಮಪ ಶೋಗೆ ಬರುವುದು ಅನುಮಾನ. ಅವರ ಸ್ಥಾನದಲ್ಲಿ ಹೊಸ ತೀರ್ಪುಗಾರರ ಆಗಮನವಾಗುವ ನಿರೀಕ್ಷೆಯಿದೆ. ಆದರೆ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರದ್ದು.