Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿ ಬಿಗ್ ಬಾಸ್ ಮತ್ತೊಂದು ಸೀಸನ್

ಶೀಘ್ರದಲ್ಲಿ ಬಿಗ್ ಬಾಸ್ ಮತ್ತೊಂದು ಸೀಸನ್
ಬೆಂಗಳೂರು , ಶುಕ್ರವಾರ, 20 ಆಗಸ್ಟ್ 2021 (10:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಕಲರ್ಸ್ ವಾಹಿನಿಗೆ ಅತೀ ಹೆಚ್ಚು ಟಿಆರ್ ಪಿ ತಂದುಕೊಡುವ ಶೋ. ಈಗಷ್ಟೇ 8 ನೇ ಸೀಸನ್ ಮುಗಿದಿದ್ದು ಈಗ ಮಿನಿ ಬಿಗ್ ಬಾಸ್ ನಡೆಯುತ್ತಿದೆ.


ಸದ್ಯಕ್ಕೆ ಕಲರ್ಸ್ ವಾಹಿನಿಯ ಎಲ್ಲಾ ಧಾರವಾಹಿ ನಟ-ನಟಿಯರನ್ನು ಒಳಗೊಂಡ ಮಿನಿ ಬಿಗ್ ಬಾಸ್ ನಡೆಯುತ್ತಿದೆ. ಇದೂ ಕೂಡಾ ಜನಪ್ರಿಯವಾಗಿದೆ.

ಇದೇ ಉತ್ಸಾಹದಲ್ಲಿ ಕಲರ್ಸ್ ವಾಹಿನಿ ಶೀಘ್ರದಲ್ಲೇ ಮತ್ತೊಂದು ಬಿಗ್ ಬಾಸ್ ಸೀಸನ್ ಆರಂಭಿಸಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ 9 ನೇ ಆವೃತ್ತಿಗೆ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಈಗಾಗಲೇ ತಯಾರಿ ಆರಂಭವಾಗಿದೆಯಂತೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ನಿಜಕ್ಕೂ ಖುಷಿಯ ವಿಚಾರ.

Share this Story:

Follow Webdunia kannada

ಮುಂದಿನ ಸುದ್ದಿ

ಸೊರಗಿದ್ದ ಬಾಲಿವುಡ್ ಗೆಲ್ಲಿಸಿದ ಅಕ್ಷಯ್ ಕುಮಾರ್