Publish Date: Fri, 10 May 2019 (06:54 IST)
Updated Date: Fri, 10 May 2019 (06:56 IST)
ಬೆಂಗಳೂರು: ಅಗ್ನಿಸಾಕ್ಷಿ ಸಿದ್ಧಾರ್ಥ್ ರಿಯಲ್ ಲೈಫ್ ನಲ್ಲಿ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗಲೇ ಎರಡನೇ ಪತ್ನಿ ಪ್ರತ್ಯಕ್ಷವಾಗಿದ್ದಾಳೆ!
ಆದರೆ ಇದು ರಿಯಲ್ ಲೈಫ್ ನಲ್ಲಿ ಅಲ್ಲ. ಧಾರವಾಹಿಯಲ್ಲಿ ಸಿದ್ಧಾರ್ಥ್ ಗೆ ಎರಡನೇ ಹೆಂಡತಿ ಅಂತ ಹೇಳಿಕೊಂಡು ಮಹಿಳೆಯೊಬ್ಬಳು ಮನೆಗೆ ಪ್ರವೇಶ ಮಾಡುತ್ತಾಳೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಗೆ ಐಡಿಯಲ್ ಜೋಡಿ ಎಂದರೆ ಸನ್ನಿಧಿ. ಇವರಿಬ್ಬರೂ ನಿಜ ಜೀವನದಲ್ಲೂ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಬಯಸಿದ್ದರು. ಆದರೆ ಅದು ನೆರವೇರಲಿಲ್ಲ. ರಿಯಲ್ ಲೈಫ್ ನಲ್ಲಿ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಬೇರೆ ಹುಡುಗಿಯನ್ನು ಮದುವೆಯಾಗಿದ್ದಕ್ಕೇ ಜನ ಅಷ್ಟೊಂದು ಬೈದವರು ಈಗ ತೆರೆ ಮೇಲೂ ಮತ್ತೊಬ್ಬ ಪತ್ನಿಯ ಕತೆ ತಂದರೆ ಸುಮ್ಮನಿರುತ್ತಾರಾ?
ಸಿದ್ಧಾರ್ಥ್ ಪತ್ನಿ ಎಂದು ಹೇಳಿಕೊಂಡು ಮತ್ತೊಬ್ಬ ಮಹಿಳೆಯ ಕ್ಯಾರೆಕ್ಟರ್ ನ್ನು ಧಾರವಾಹಿಯಲ್ಲಿ ತಂದಿದ್ದಕ್ಕೆ ಜನ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್-ಸನ್ನಿಧಿ ಜೋಡಿ ಎಂದರೆ ಅದೆಷ್ಟೋ ಜನಕ್ಕೆ ಆದರ್ಶ. ಸುಮ್ಮನೇ ಇವರ ಮಧ್ಯೆ ಇನ್ನೊಬ್ಬರನ್ನು ತಂದು ಹಾಕಿ ಈಗಾಗಲೇ ಹಳಿ ತಪ್ಪಿರುವ ಕತೆಯನ್ನು ಮತ್ತಷ್ಟು ಕೆಡಿಸಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ