ಬೆಂಗಳೂರು: ಕಿರುತೆರೆಯ ನಟಿಯರ ಮದುವೆ ಸುದ್ದಿಗಳು ಒಂದೊಂದಾಗಿ ಕೇಳಿಬರುತ್ತಿದೆ. ಇದೀಗ ಕನ್ನಡ ಮತ್ತು ತೆಲುಗಿನ ಖ್ಯಾತ ನಟಿ ಐಶ್ವರ್ಯಾ ಪಿಸ್ಸೆ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಐಶ್ವರ್ಯಾ ಪಿಸ್ಸೆ ತೆಲುಗಿನ ಅಗ್ನಿಸಾಕ್ಷಿ, ಕನ್ನಡದ ಸರ್ವಮಂಗಲ ಮಾಂಗಲ್ಯೇ ಧಾರವಾಹಿಯ ನಾಯಕಿಯಾಗಿ ಸದ್ಯಕ್ಕೆ ಅಭಿನಯಿಸುತ್ತಿದ್ದಾರೆ. ಇದಕ್ಕೆ ಮೊದಲು ಕನ್ನಡದಲ್ಲಿ ಅನುರೂಪ ಧಾರವಾಹಿಯಲ್ಲೂ ನಾಯಕಿ ಪಾತ್ರ ಮಾಡಿದ್ದರು.
ಇದೀಗ ಹರಿ ವಿನಯ್ ಎಂಬವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ನಡೆದಿದೆ. ನಟಿಯ ಎಂಗೇಜ್ ಮೆಂಟ್ ಗೆ ಸಹ ನಟ ಚಂದನ್ ಕುಮಾರ್ ಸೇರಿದಂತೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ