Select Your Language

Notifications

webdunia
webdunia
webdunia
webdunia

‘ಪುಟ್ಟಗೌರಿ’ ರಂಜಿನಿ ರಾಘವನ್ ಧಾರವಾಹಿಗೆ ಖ್ಯಾತ ನಟನ ಪುನರಾಗಮನ

‘ಪುಟ್ಟಗೌರಿ’ ರಂಜಿನಿ ರಾಘವನ್ ಧಾರವಾಹಿಗೆ ಖ್ಯಾತ ನಟನ ಪುನರಾಗಮನ
ಬೆಂಗಳೂರು , ಗುರುವಾರ, 9 ಮೇ 2019 (08:31 IST)
ಬೆಂಗಳೂರು: ಪುಟ್ಟಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್ ಹೊಸ ಧಾರವಾಹಿಯೊಂದರ ಚಿತ್ರಕತೆ ಬರೆಯುತ್ತಿದ್ದಾರೆ. ಆ ಧಾರವಾಹಿಗೆ ಇದೀಗ ಕಿರುತೆರೆಯ ಖ್ಯಾತ ನಟನ ಪುನರಾಗಮನವಾಗಿದೆ.


ನೃತ್ಯ ಪಟು ಮತ್ತು ಫುಡ್ ಪ್ರಾಡಕ್ಟ್ ಕಂಪನಿ ಮಾಲಿಕನ ನಡುವಿನ ಕಥಾ ಹಂದರವುಳ್ಳ ಲವ್ ಸ್ಟೋರಿಗೆ ರಂಜಿನಿ ಕತೆ, ಚಿತ್ರಕತೆ ಬರೆಯುತ್ತಿದ್ದಾರೆ.  ಇನ್ನು ತಮ್ಮ ಧಾರವಾಹಿಗೆ ರಂಜಿನಿ ಆಂಡ್ ಟೀಂ ಕಿರುತೆರೆಯ ಜನಪ್ರಿಯ ನಟ ನವೀನ್ ಮಹದೇವ್ ರನ್ನು ಕರೆತಂದಿದ್ದಾರೆ.

ನವೀನ್ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶ್ರೀರಸ್ತು ಶುಭಮಸ್ತು’ ಧಾರವಾಹಿಯ ಹೀರೋ ಆಗಿ ಅಭಿನಯಿಸಿದ್ದರು. ಅದಾದ ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದ ನವೀನ್ ಕೆಲವು ದಿನ ಕಿರುತೆರೆಯಿಂದ ದೂರವಿದ್ದರು. ಇದೀಗ ಮತ್ತೆ ಮರಳಿ ಬರುತ್ತಿದ್ದಾರೆ. ನವೀನ್ ಪುನರಾಗಮನಕ್ಕೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮದ್ವೆ ಆದ್ಮೇಲೆ ಆಕ್ಟಿಂಗ್ ನಿಲ್ಸಿದ್ರಾ? ಈ ಪ್ರಶ್ನೆಗೆ ಮೇಘನಾ ರಾಜ್ ಕೊಟ್ಟ ಉತ್ತರವೇನು ಗೊತ್ತಾ?