Select Your Language

Notifications

webdunia
webdunia
webdunia
webdunia

ಕನ್ನಡ ಕಿರುತೆರೆಯ ಮತ್ತೊಂದು ಫೇವರಿಟ್ ಜೋಡಿಗೆ ಮದುವೆ

ಕನ್ನಡ ಕಿರುತೆರೆಯ ಮತ್ತೊಂದು ಫೇವರಿಟ್ ಜೋಡಿಗೆ ಮದುವೆ
ಬೆಂಗಳೂರು , ಮಂಗಳವಾರ, 7 ಮೇ 2019 (07:55 IST)
ಬೆಂಗಳೂರು: ಕನ್ನಡ ಕಿರುತೆರೆ ನಟಿಯರು ಒಬ್ಬರಾದ ಮೇಲೆ ಒಬ್ಬರಂತೇ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಕಿರುತೆರೆಯ ಹಾಟ್ ಫೇವರಿಟ್ ವಿಜಯ್ ಸೂರ್ಯ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಇದಾದ ಬಳಿಕ ಕುಲವಧು ಧಾರವಾಹಿ ಮೂಲಕ ಖ್ಯಾತರಾದ ಧನ್ಯಾ ಅಲಿಯಾಸ್ ದೀಪಿಕಾ ವಿವಾಹವಾಗುತ್ತಿರುವುದಾಗಿ ಮೊನ್ನೆಯಷ್ಟೇ ಸುದ್ದಿ ಕೊಟ್ಟಿದ್ದಾರೆ.

ಇದೀಗ ಮತ್ತೊಂದು ಕಿರುತೆರೆಯ ಫೇವರಿಟ್ ಜೋಡಿ ಮದುವೆಗೆ ಸಿದ್ಧವಾಗಿ ನಿಂತಿದೆ. ಕುಲವಧು ಧಾರವಾಹಿಯಲ್ಲಿ ನಟಿಸುತ್ತಿರುವ ವಚನಾ ಅಲಿಯಾಸ್ ಅಮೃತಾ ರಾಮಮೂರ್ತಿ ಮೇ 13 ರಂದು ವಿವಾಹವಾಗುತ್ತಿದ್ದಾರೆ. ಈ ಹಿಂದೆ ಅಮೃತಾ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಆಂಡ್ ಮಿಸೆಸ್ ರಂಗೇಗೌಡ ಧಾರವಾಹಿಯಲ್ಲಿ ಜೋಡಿಯಾಗಿ ಅಭಿನಯಿಸಿದ್ದ ರಘು ಅವರನ್ನೇ ಅಮೃತಾ ವಿವಾಹವಾಗುತ್ತಿದ್ದಾರೆ.

ಮೇ 12 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ಅಲ್ಲಿಯೇ ಮರುದಿನ ಅಂದರೆ ಮೇ 13 ರಂದು ಮದುವೆ ಸಮಾರಂಭ ನಡೆಯಲಿದೆ. ರಘು ಸದ್ಯಕ್ಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿದ್ದಾರೆ. ಇಬ್ಬರೂ ಮದುವೆಗಾಗಿ ಚಿತ್ರೀಕರಣದಿಂದ ಕೆಲವು ದಿನಗಳ ಬಿಡುವು ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಂಬಾಕು ಜಾಹೀರಾತಿನಲ್ಲಿ ನಟಿಸಬೇಡಿ ಎಂದು ಅಜಯ್ ದೇವಗನ್ ಗೆ ಮನವಿ ಮಾಡಿದ ಕ್ಯಾನ್ಸರ್ ಪೀಡಿತ ಅಭಿಮಾನಿ