ವೀಕೆಂಡ್ ವಿತ್ ರಮೇಶ್ ಗೆ ಎರಡನೇ ಅತಿಥಿ ಯಾರು ಗೊತ್ತಾ?

ಮಂಗಳವಾರ, 23 ಏಪ್ರಿಲ್ 2019 (07:47 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ನಾಲ್ಕನೇ ಸೀಸನ್ ನ ಮೊದಲ ಅತಿಥಿಯಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿ ಅವರ ಕತೆಯನ್ನು ಹೇಳಿದ್ದರು.


ಇದೀಗ ಎರಡನೇ ವಾರದ ಅತಿಥಿ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹೆಗ್ಗಡೆ ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಎರಡನೇ ವಾರ ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿದ್ದು, ತಮ್ಮ ಜೀವನದ ಕತೆ ಹೇಳಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗ ಭಾರೀ ಹಿಟ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಆಫರ್ ಪಡೆದ ದೂದ್ ಪೇಡಾ ದಿಗಂತ್