‘ವೀಕೆಂಡ್ ವಿತ್ ರಮೇಶ್’ ಸೀಸನ್ 4 ಶುರು ಆಗುತ್ತಿರುವುದಕ್ಕೆ ಖುಷ್ ಆದ ಕಿಚ್ಚ ಸುದೀಪ್

ಬುಧವಾರ, 17 ಏಪ್ರಿಲ್ 2019 (07:55 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜೀ ಕನ್ನಡದಲ್ಲಿ ಈ ವಾರಂತ್ಯದಿಂದ ಆರಂಭವಾಗುತ್ತಿದೆ. ವೀಕ್ಷಕರ ಜತೆಗೆ ಸಾಧಕರೂ ಈಗ ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ.


ಈ ಹಿಂದಿನ ಸೀಸನ್ ನಲ್ಲಿ ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನದ ಕತೆ ಹೇಳಿದ್ದ ಕಿಚ್ಚ ಸುದೀಪ್ ಇದೀಗ ಸೀಸನ್ 4 ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.

‘ರಮೇಶ್ ಅರವಿಂದ್ ಸರ್ ಹಲವು ಸಾಧಕರನ್ನು ತಮ್ಮ ಜೀವನದ ಪುಟ ತಿರುವಂತೆ ಮಾಡಿದ್ದೀರಿ. ಇದು ಕೇವಲ ಸಂದರ್ಶನವಲ್ಲ. ನಮ್ಮ ಜೀವನದ ಗತ ವೈಭವವನ್ನು ಮೆಲುಕು ಹಾಕುವ ಶೋ. ಆ ನೆನಪುಗಳೇ ನಮ್ಮ ಗುರುತುಗಳು. ನಿಮ್ಮ ಹೊಸ ಸೀಸನ್ ಗೆ ಶುಭ ಹಾರೈಕೆಗಳು ರಮೇಶ್ ಸರ್. ಆ ಕೆಂಪು ಖುರ್ಚಿಯೇ ಈಗ ಸೆಲೆಬ್ರಿಟಿ ಆಗಿಬಿಟ್ಟಿದೆ’ ಎಂದು ಸುದೀಪ್ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೇರ್ ನೆಸ್ ಕ್ರೀಂ ಕಂಪನಿ ನೀಡಿದ 2 ಕೋಟಿ ರೂ. ಆಫರ್ ತಿರಸ್ಕರಿಸಿದ ನಟಿ ಸಾಯಿ ಪಲ್ಲವಿ! ಕಾರಣವೇನು ಗೊತ್ತಾ?