Publish Date: Thu, 11 Apr 2019 (09:03 IST)
Updated Date: Thu, 11 Apr 2019 (09:05 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂರನೇ ಸೀಸನ್ ಶುರುವಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಕೊನೆಗೂ ಸಿಕ್ಕಿದೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಏಪ್ರಿಲ್ 20 ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗಲಿರುವುದಾಗಿ ವಾಹಿನಿ ಪ್ರಕಟಣೆ ತಿಳಿಸಿದೆ.
ಈಗಾಗಲೇ ಕಾರ್ಯಕ್ರಮ ಎರಡು ಸೀಸನ್ ಮುಗಿಸಿದ್ದು, ಹಲವು ಸಾಧಕರು ಸಾಧಕರ ಸೀಟ್ ನಲ್ಲಿ ಕೂತು ತಮ್ಮ ಕತೆ ಹೇಳಿ ಹೋಗಿದ್ದಾರೆ. ಈ ಸೀಸನ್ ನಲ್ಲಿ ಮತ್ತಷ್ಟು ಸಾಧಕರ ಕತೆ ಹೇಳಲು ರಮೇಶ್ ಅರವಿಂದ್ ನಿಮ್ಮ ಮುಂದೆ ಬರುತ್ತಿದ್ದಾರೆ. ಕಾಯುತ್ತಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ