Publish Date: Fri, 29 Mar 2019 (08:50 IST)
Updated Date: Fri, 29 Mar 2019 (08:51 IST)
ಬೆಂಗಳೂರು: ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಅದೆಷ್ಟು ಜನಪ್ರಿಯವಾಗಿತ್ತು ಎಂದರೆ ಜನ ಆಗಾಗ ಎಲ್ಲೇ ಹೋದರೂ ಮತ್ತೆ ಯಾವಾಗ ಶುರು ಮಾಡ್ತೀರಿ ಎಂದು ಕೇಳ್ತಿರ್ತಾರೆ ಎಂದು ರಮೇಶ್ ಅರವಿಂದ್ ಹಿಂದೊಮ್ಮೆ ಹೇಳಿದ್ದರು.
ಇದೀಗ ಜನರ ಒತ್ತಾಸೆಯ ಮೇರೆಗೆ ಮತ್ತೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರ ಮಾಡಲು ಜೀ ಕನ್ನಡ ತೀರ್ಮಾನಿಸಿದೆ. ಆದರೆ ಯಾವಾಗಿನಿಂದ ಎಂದು ಇನ್ನೂ ಪ್ರಕಟಿಸಿಲ್ಲ. ಆದರೆ ಮತ್ತೊಂದು ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಬರುತ್ತಿರುವುದು ಪಕ್ಕಾ ಆಗಿದೆ.
ಹಿಂದಿನ ಸೀಸನ್ ಗಳಲ್ಲಿ ಕನ್ನಡ ಸಿನಿಮಾದ ದಿಗ್ಗಜ ನಟರು, ತಂತ್ರಜ್ಞರು, ಸಾಮಾಜಿಕ ಸೇವಕರು, ನಿಷ್ಠಾವಂತ ಪೊಲೀಸ್ ಅಧಿಕಾರಿ ಇತ್ಯಾದಿ ಬಂದು ಕಾರ್ಯಕ್ರಮದಲ್ಲಿ ತಮ್ಮ ಜೀವನದ ಇದುವರೆಗೆ ಯಾರಿಗೂ ತಿಳಿಯದ ಸ್ಪೂರ್ತಿದಾಯಕ ಕತೆಗಳನ್ನು ಹೇಳಿದ್ದರು. ಈ ಬಾರಿ ಮತ್ತೆ ಯಾವ ಸಾಧಕರು ಹಾಟ್ ಸೀಟ್ ಗೆ ಬರುತ್ತಾರೆ ಎಂದು ಕಾದುನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ