Publish Date: Sat, 02 Mar 2019 (09:45 IST)
Updated Date: Sat, 02 Mar 2019 (09:47 IST)
ಬೆಂಗಳೂರು: ಸ್ಪುರದ್ರೂಪಿ ನಟ, ನಿರ್ದೇಶಕ ರಮೇಶ್ ಅರವಿಂದ್ ಏನೇ ಮಾಡುವುದಿದ್ದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ. ಇದೀಗ ನಿರ್ದೇಶಕರಾಗಿ ಪರ್ಫೆಕ್ಟ್ ಎನಿಸಿಕೊಂಡ ರಮೇಶ್, ನಿರ್ಮಾಪಕರಾಗುತ್ತಿದ್ದಾರೆ.
ಅದೂ ಕಿರುತೆರೆಯಲ್ಲಿ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರವಾಹಿಗೆ ಇನ್ನು ರಮೇಶ್ ಅರವಿಂದ್ ನಿರ್ಮಾಪಕ. ಅವರ ‘ವಂದನಾ’ ಮೀಡಿಯಾ ಕ್ರಿಯೇಷನ್ಸ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಧಾರವಾಹಿಯ ಮುಂದಿನ ಭಾಗವನ್ನು ರಮೇಶ್ ಅರವಿಂದ್ ನಿರ್ಮಿಸಲಿದ್ದಾರೆ.
ಈಗಾಗಲೇ ನಂದಿನಿ ಧಾರವಾಹಿ ತನ್ನ ವಿಶಿಷ್ಟ ಗ್ರಾಫಿಕ್ಸ್, ವಿಶ್ಯುವಲ್ಸ್ ನಿಂದಾಗಿ ಜನಪ್ರಿಯವಾಗಿದೆ. ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ರಮೇಶ್ ಅರವಿಂದ್ ನಂದಿನಿ ಧಾರವಾಹಿಯ ಫ್ಯಾಂಟಸಿ ಕತೆಯನ್ನು ಮೆಚ್ಚಿ ನಿರ್ಮಾಣಕ್ಕಿಳಿದಿದ್ದಾರಂತೆ. ಅವರಿಗೆ ಇಂತಹ ಸೂಪರ್ ನ್ಯಾಚುರಲ್ ವಿಚಾರಗಳಿರುವ ಕತೆಗಳೆಂದರೆ ಬಹಳ ಇಷ್ಟವಂತೆ. ಅದೇ ಕಾರಣಕ್ಕೆ ನಿರ್ಮಾಣ ಮಾಡುತ್ತಿದ್ದೇನೆ ಎಂದಿದ್ದಾರೆ ರಮೇಶ್ ಅರವಿಂದ್. ಈಗಾಗಲೇ ಕಿಚ್ಚ ಸುದೀಪ್ ವಾರಸ್ದಾರ ಎನ್ನುವ ಧಾರವಾಹಿ ನಿರ್ಮಿಸಿದ್ದರು. ಪುನೀತ್ ರಾಜ್ ಕುಮಾರ್ ಕೂಡ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಧಾರವಾಹಿ ನಿರ್ಮಾಣ ಮಾಡಿದ್ದರು. ಈಗ ರಮೇಶ್ ಅರವಿಂದ್ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.