Select Your Language

Notifications

webdunia
webdunia
webdunia
Sunday, 13 April 2025
webdunia

ಸಂಕ್ರಾಂತಿಗೆ ಜೀ, ಉದಯ, ಕಲರ್ಸ್ ಟಿವಿಯಲ್ಲಿ ಇಂದಿನಿಂದಲೇ ಹಬ್ಬ ಶುರು

ಸಂಕ್ರಾಂತಿ ಹಬ್ಬ
ಬೆಂಗಳೂರು , ಭಾನುವಾರ, 13 ಜನವರಿ 2019 (09:13 IST)
ಬೆಂಗಳೂರು: ಸಂಕ್ರಾಂತಿ ಹಬ್ಬ ಕನ್ನಡ ಕಿರುತೆರೆಗಳಲ್ಲಿ ಇಂದಿನಿಂದಲೇ ಶುರು. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಸೇರಿದಂತೆ ಎಲ್ಲಾ ಕನ್ನಡ ಕಿರುತೆರೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ ಕಾರ್ಯಕ್ರಮಗಳ ಧಮಾಕವಿದೆ.

ಜೀ ಕನ್ನಡ ನಿನ್ನೆಯಿಂದಲೇ ಸಂಕ್ರಾಂತಿಗೆ ಸರಿಗಮಪ ಜಾನಪದ ಸ್ಪೆಷಲ್ ಎಪಿಸೋಡ್ ಮಾಡುತ್ತಿದೆ. ಇದರಲ್ಲಿ ಸ್ಪರ್ಧಿಗಳ ಜತೆಗೆ ಜನಪದ ಕಲಾವಿದರೂ ಭಾಗವಹಿಸುತ್ತಿರುವುದು ವಿಶೇಷ. ಅಲ್ಲದೆ, ಇಂದು ಮಧ್ಯಾಹ್ನ 2 ಗಂಟೆಯಿಂದ ನಟ ಸಾರ್ವಭೌಮ ಅಡಿಯೋ ರಿಲೀಸ್ ಕಾರ್ಯಕ್ರಮ ಕೂಡಾ ಪ್ರಸಾರವಾಗುತ್ತಿದೆ. ಅದರ ಜತೆಗೆ ಧಾರವಾಹಿಗಳೂ ಸಂಕ್ರಾಂತಿಯ ಕಳೆಗಟ್ಟಿದೆ.

ಉದಯ ಟಿವಿಯಲ್ಲಿ ಸಂಕ್ರಾಂತಿ ದಿನ ಸಂಕ್ರಾಂತಿ ಸ್ಪೆಷಲ್ ಎಂದೇ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ರಾಜೇಶ್ ಕೃಷ್ಣನ್ ಮುಂತಾದ ಖ್ಯಾತ ಗಾಯಕರ ಕಾರ್ಯಕ್ರಮಗಳಿವೆ. ಕಲರ್ಸ್ ಕನ್ನಡ ಕೂಡಾ ಸಂಕ್ರಾಂತಿ ಪ್ರಯುಕ್ತ ಇಂದು ಸಂಜೆ ಕಲರ್ ಕಲರ್ ಸಂಕ್ರಾಂತಿ ಎಂಬ  ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಅಂತೂ ಈ ವೀಕೆಂಡ್ ಅದ್ಭುತವಾಗ ಕಳೆಯಲು ಕಿರುತೆರೆ ಭರ್ಜರಿ ರಸದೂಟವನ್ನೇ ಒದಗಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ 200 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಸ್ಯಾಂಡಲ್ ವುಡ್ ನ ಹೊಸ ದಾಖಲೆ