Select Your Language

Notifications

webdunia
webdunia
webdunia
Friday, 11 April 2025
webdunia

ನಿಮ್ಮ ಉದಯ ಟಿವಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ ಹೊಸ ರಿಯಾಲಿಟಿ ಶೋ “ತುತ್ತಾ ಮುತ್ತಾ”

ಬೆಂಗಳೂರು
ಬೆಂಗಳೂರು , ಶನಿವಾರ, 27 ಅಕ್ಟೋಬರ್ 2018 (14:01 IST)
ಬೆಂಗಳೂರು : ಹೊಸ ರೀತಿಯ ರಿಯಾಲಿಟಿ ಶೋಗಳನ್ನು  ನೀಡುವುದರ ಮೂಲಕ ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿರುವ ಕರ್ನಾಟಕದ ಹೆಮ್ಮೆಯ ವಾಹಿನಿಯಾದ ಉದಯ ಟಿವಿ ಇದೀಗ “ತುತ್ತಾ ಮುತ್ತಾ” ಎನ್ನುವ ಹೊಸ ರಿಯಾಲಿಟಿ ಶೋ ಕಾರ್ಯಕ್ರಮವೊಂದನ್ನು ಶುರುಮಾಡಲಿದೆ.


ಹಿರಿತೆರೆ ಮತ್ತು ಕಿರುತೆರೆಯ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಾರೆಯರ ಮಡದಿ ಮತ್ತು ತಾಯಂದಿರ ನಡುವೆ ನಡೆಯುವ ಪೈಪೋಟಿಯೇ ಈ  “ತುತ್ತಾ ಮುತ್ತಾ” ಕಾರ್ಯಕ್ರಮವಾಗಿದೆ.


ಈ ಕಾರ್ಯಕ್ರಮ ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ  ಮೂಡಿಬರಲಿದೆ. ಆಟದಲ್ಲಿ ತಾರೆಯರ ತಾಯಿ ಒಂದು ಕಡೆ, ಹೆಂಡತಿ ಒಂದು ಕಡೆ ನಿಂತು ನಿರಂಜನ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಹನ್ನೆರಡು ಪ್ರಶ್ನೆಗಳಿಂದ ಐದು ಲಕ್ಷ ಗೆಲ್ಲುವ ಅವಕಾಶ ಇವರಿಗೆ ಇರುತ್ತದೆ. ಇದರಲ್ಲಿ ಸರಿಯಾಗಿ ಉತ್ತರ ಕೊಡುವವರು ಯಾರು ಎಂಬ ಆಯ್ಕೆ ಮಾತ್ರ ಬಂದ ತಾರೆಯರದ್ದು. ಉತ್ತರ ತಪ್ಪಾದಲ್ಲಿ ಬರೀ ಒಂದು ಕಡೆಯಿಂದ ಮಾತ್ರವಲ್ಲದೆ, ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಹಣ ಕಡಿತವಾಗುತ್ತ ಬರುತ್ತದೆ.


ಈಗಾಗಲೇ ಈ ಆಟದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಹಾಸ್ಯ ನಟ ಕುರಿ ಪ್ರತಾಪ್ ಭಾಗವಹಿಸಿದ್ದಾರೆ.  ಈ “ತುತ್ತಾ ಮುತ್ತಾ” ಇದೇ ಶನಿವಾರದಿಂದ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೈರ್ ನ ಅಧ್ಯಕ್ಷರಾಗಿ ನಿರ್ದೇಶಕಿ ಕವಿತಾ ಲಂಕೇಶ್ ಆಯ್ಕೆ