Select Your Language

Notifications

webdunia
webdunia
webdunia
webdunia

ಥೈರಾಯ್ಡ್‌ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಿ

ಥೈರಾಯ್ಡ್‌ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಶನಿವಾರ, 27 ಅಕ್ಟೋಬರ್ 2018 (12:16 IST)
ಬೆಂಗಳೂರು : ಇತ್ತೀಚೆಗೆ ಹಲವು ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಅದು ಥೈರಾಯ್ಡ್. ಈ ಸಮಸ್ಯೆ ಉಂಟಾಗಲು ನಮ್ಮ ಜೀವನಶೈಲಿ ಹಾಗೂ ಆಹಾರಶೈಲಿ ಒಂದು ಮುಖ್ಯ ಕಾರಣ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಥೈರಾಯ್ಡ್‌ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು.


*ಸೇಬು: ಸೇಬಿನಲ್ಲಿರುವ ಪೆಕ್ಟಿನ್‌ ನಾರಿನಂಶ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತೆ.

*ತೆಂಗಿನೆಣ್ಣೆ : ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತೆಂಗಿನೆಣ್ಣೆ ತುಂಬಾ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇರುವವರು ದಿನಾ 1- 2 ಚಮಚ ತೆಂಗಿನೆಣ್ಣೆಯನ್ನು ಆಹಾರ ಜತೆ ಮಿಕ್ಸ್ ಮಾಡಿ ತಿಂದು ಥೈರಾಯ್ಡ್ ಹಾರ್ಮೋನ್‌ ನಿಯಂತ್ರಣದಲ್ಲಿಡಬಹುದು.

*ಮೊಸರು: ಇದರಲ್ಲಿ ವಿಟಮಿನ್‌ ಡಿ ಇದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕು.

*ಪಾಲಾಕ್‌ : ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ ಇದ್ದು ಥೈರಾಯ್ಡ್ ಹಾರ್ಮೋನ್‌ ಉತ್ಪತ್ತಿಗೆ ಸಹಕಾರಿ.

*ಸಿಹಿಕುಂಬಳಕಾಯಿ ಬೀಜ: ಇದರಲ್ಲಿ ಸತು ಇದ್ದು ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

*ವಾಲ್‌ನಟ್‌ : ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

*ಬಾದಾಮಿ: ಬಾದಾಮಿಯಲ್ಲಿ ಕಬ್ಬಿಣದಂಶ, ಪ್ರೊಟೀನ್‌, ಸತುವಿನಂಶವಿದ್ದು ಆರೋಗ್ಯಕ್ಕೆ ಒಳ್ಳೆಯದು.

*ಬೆಳ್ಳುಳ್ಳಿ: ಬೆಳ್ಳುಳ್ಳಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಮೂತ್ರಿಸಿದ ಹಾಸಿಗೆ ಕ್ಲೀನ್ ಮಾಡಲು ಸುಲಭ ಉಪಾಯ