ಅನುಶ್ರೀನೇ ಸೂಪರ್! ರಚಿತಾರಾಂ ಅವರದ್ದು ಓವರ್ ಆಕ್ಷನ್!

ಶನಿವಾರ, 12 ಜನವರಿ 2019 (09:54 IST)
ಬೆಂಗಳೂರು: ಟಿಆರ್ ಪಿಯಲ್ಲಿ ನಂ.1 ಪಟ್ಟಕ್ಕೇರಿರುವ ಜೀ ಕನ್ನಡ ವಾಹಿನಿಯಲ್ಲಿ ನಾಳೆ ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆದ ನಟಸಾರ್ವಭೌಮ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಬಗ್ಗೆ ಜೀ ಕನ್ನಡ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಝಲಕ್ ಹರಿಯಬಿಟ್ಟಿದೆ. ಆದರೆ ವಿಡಿಯೋ ಒಂದರಲ್ಲಿ ರಚಿತಾ ರಾಂ ಮತ್ತು ಆಂಕರ್ ಅನುಶ್ರೀ ರಾಜ್ ಕುಟುಂಬದ ಹಾಡುಗಳಿಗೆ ಕುಣಿಯುವುದನ್ನು ನೋಡಿ ಅಭಿಮಾನಿಗಳು ರಚಿತಾ ರಾಂಗೆ ಓವರ್ ಆಕ್ಟಿಂಗ್ ಎಂದು ಲೇವಡಿ ಮಾಡಿದರೆ ಅನುಶ್ರೀ ಸೂಪರ್ ಎಂದು ಕೊಂಡಾಡಿದ್ದಾರೆ.

ಡಾ. ರಾಜ್ ರಿಂದ ಹಿಡಿದು, ಶಿವಣ್ಣ, ರಾಘಣ್ಣ, ಪುನೀತ್ ಹಾಡುಗಳಿಗೆ ವೇದಿಕೆಯಲ್ಲಿ ಟಪ್ಪಾಂಗುಚ್ಚಿ ನೃತ್ಯ ಮಾಡುವ ರಚಿತಾ ರಾಂ ಕುಣಿತ ನೋಡಿ ಅಭಿಮಾನಿಗಳು ರಚಿತಾ ಓವರ್ ಆಕ್ಟಿಂಗ್, ಡವ್ ರಾಣಿ ಎಂದೆಲ್ಲಾ ಜರೆದಿದ್ದಾರೆ. ಆದರೆ ತಮ್ಮ ಮೆಚ್ಚಿನ ಆಂಕರ್ ಅನುಶ್ರೀ ಕುಣಿತ ಸೂಪರ್ ಎಂದಿದ್ದಾರೆ.

 ಈ ಕಾರ್ಯಕ್ರ ನಾಳೆ ಮಧ್ಯಾಹ್ನ 2 ಗಂಟೆಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪುನೀತ್ ರಾಜ್ ಕುಮಾರ್ ಸೇರಿದಂತೆ ನಿಮ್ಮ ನೆಚ್ಚಿನ ತಾರೆಯರು ಭಾಗವಹಿಸಿದ ಅದ್ಧೂರಿ ಕಾರ್ಯಕ್ರಮ ಇದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೆ ಶುರುವಾಯ್ತು ಯಶ್, ಸುದೀಪ್ ಅಭಿಮಾನಿಗಳ ವಾರ್