ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ ರಾಕಿಂಗ್ ಸ್ಟಾರ್ ಯಶ್

ಶನಿವಾರ, 12 ಜನವರಿ 2019 (09:17 IST)
ಬೆಂಗಳೂರು: ಐಟಿ ದಾಳಿಗೊಳಗಾದ ಬಳಿಕ ವಿಚಾರಣೆಗಾಗಿ ನಿನ್ನೆಯಷ್ಟೇ ಐಟಿ ಕಚೇರಿ ಹೋಗಿ ಬಂದ ರಾಕಿಂಗ್ ಸ್ಟಾರ್ ಯಶ್ ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ್ದಾರೆ.


ತಮ್ಮ ಬಗ್ಗೆ ಇದ್ದಿದ್ದನ್ನು ಹೇಳುವುದು ಬಿಟ್ಟು, ಐಟಿ ಅಧಿಕಾರಿಗಳು ಹೇಳಿದ ದಿನಾಂಕಕ್ಕೆ ವಿಚಾರಣೆಗೆ ಬರದೇ ತಪ್ಪಿಸಿಕೊಂಡೆ. ತಮ್ಮ ಮೇಲೆ 40 ಕೋಟಿ ಸಾಲ ಇದೆ ಎಂದೆಲ್ಲಾ ಊಹಾಪೋಹ ಹಬ್ಬಿಸುತ್ತಿರುವ ಒಂದು ವಾಹಿನಿ ಮೇಲೆ ಯಶ್ ಕಿಡಿ ಕಾರಿದ್ದಾರೆ.

ಆದರೆ ಆ ಒಂದು ಮಾಧ್ಯಮ ಎಂದು ಯಶ್ ಹೇಳುತ್ತಿದ್ದಂತೆ ಆ ಮಾಧ್ಯಮದ ಹೆಸರು ಬಹಿರಂಗಪಡಿಸಿ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಒತ್ತಾಯಿಸಿದಾಗ ಯಶ್ ನಾನ್ಯಾಕೆ ಹೇಳಬೇಕು. ಮಾಡಿದವರಿಗೆ, ಜನತೆಗೆ ಗೊತ್ತಿರುತ್ತದೆ. ನಿಮಗೆ ನಾನು ಐಟಿ ವಿಚಾರಣೆಯ ಡೀಟೈಲ್ ಕೊಡಬೇಕಾದ ಅಗತ್ಯವಿಲ್ಲ. ಹಾಗಿದ್ದರೂ ಯಾಕೆ ಇಲ್ಲಿ ಬಂದು ಮಾತನಾಡುತ್ತಿದ್ದೇನೆ ಅಂದರೆ ಅದು ನಾವು ನಿಮಗೆ ಕೊಡುವ ಗೌರವ. ಹಾಗೇ ನಾನೂ ನೀವೂ ನನ್ನ ಮೇಲೆ ಅಷ್ಟೇ ಪ್ರೀತಿಯಿಟ್ಟುಕೊಂಡಿದ್ದೀರೆ. ಆದರೆ ನಾನು ಒಬ್ಬ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಬಾಯಿಗೆ ಬಂದ ಹಾಗೆ ವರದಿ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಆದರೆ ಕೊನೆಯವರೆಗೂ ಆ ಮಾಧ್ಯಮದ ಹೆಸರು ಹೇಳಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿ ಜತೆ ಸೆಲ್ಫೀಗೆ ಮುಗಿಬಿದ್ದ ಬಾಲಿವುಡ್ ತಾರೆಯರು