ರಾಕಿಂಗ್ ಸ್ಟಾರ್ ಯಶ್ ಗೆ ಇನ್ನೂ ಬೆಂಬಿಡದ ಐಟಿ ಭೀತಿ: ಮತ್ತೆ ಐಟಿ ಬೇಟೆ ಶುರು

ಶುಕ್ರವಾರ, 11 ಜನವರಿ 2019 (08:50 IST)
ಬೆಂಗಳೂರು: ಸತತ ಎರಡು ದಿನಗಳ ಕಾಲ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆಸಿದ್ದ ಅಧಿಕಾರಿಗಳು ಇದೀಗ ನಾಲ್ಕು ದಿನಗಳ ಬ್ರೇಕ್ ನಂತರ ಮರಳಿದ್ದಾರೆ.


ನಿನ್ನೆ ತಡರಾತ್ರಿ ರಾಕಿಂಗ್ ಸ್ಟಾರ್ ಯಶ್ ಅವರ ಅಡಿಟರ್ ಬಸವರಾಜ್ ಅವರ ಕಚೇರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ಯಶ್ ಸೇರಿದಂತೆ ಹಲವು ಸ್ಟಾರ್ ಗಳಿಗೆ ಅಡಿಟರ್ ಆಗಿರುವ ಬಸವರಾಜ್ ಬಳಿ ಎಲ್ಲರ ಬ್ಯಾಂಕ್ ಡೀಟೈಲ್ಸ್ ಮತ್ತಿತರ ದಾಖಲೆ ಕೇಳಿದ್ದಾರೆ ಎನ್ನಲಾಗಿದೆ.

ಬಳಿಕ ಬಸವರಾಜ್ ಕಚೇರಿಯಿಂದ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಇದೇ ವೇಳೆ ಮೊನ್ನೆ ದಾಳಿಗೊಳಗಾದ ಸ್ಟಾರ್ ನಟ, ನಿರ್ಮಾಪಕರು ಈಗಾಗಲೇ ಐಟಿ ಕಚೇರಿಗೆ ತೆರಳಿ ದಾಖಲೆಗಳ ದೃಢೀಕರಣ ಮತ್ತು ವಿಚಾರಣೆ ಎದುರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೃದಯ ಶಸ್ತ್ರಚಿಕಿತ್ಸೆಗೊಳಗಾದ ನಿರ್ಮಾಪಕ ಕೆ.ಮಂಜು: ಚಿತ್ರರಂಗದ ಆಪ್ತರ ಭೇಟಿ