ಬಿಡುಗಡೆಯಾದ ಕ್ಷಣದಲ್ಲೇ ನಂ.1 ಆದ ಸಲಾಂ ರಾಕಿ ಬಾಯ್ ವಿಡಿಯೋ ಸಾಂಗ್

ಗುರುವಾರ, 10 ಜನವರಿ 2019 (09:40 IST)
ಬೆಂಗಳೂರು: ಕೆಜಿಎಫ್ ಸಿನಿಮಾದ ಮುಖ್ಯ ಆಕರ್ಷಣೆಗಳಲ್ಲಿ ಒಂದು ಸಲಾಂ ರಾಕಿ ಬಾಯ್ ಹಾಡು. ಇದೀಗ ಸಲಾಂ ರಾಕಿ ಬಾಯ್ ವಿಡಿಯೋ ಸಾಂಗ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದಿದೆ.


ಹೊಂಬಾಳೆ ಫಿಲಂಸ್ ಈ ವಿಡಿಯೋ ಸಾಂಗ್ ನ್ನು ನಿನ್ನೆ ರಾಕಿಂಗ್ ಸ್ಟಾರ್ ಯಶ್  ಬರ್ತ್ ಡೇ ನಿಮಿತ್ತ ಬಿಡುಗಡೆ ಮಾಡಿತ್ತು. ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ.

ಅಷ್ಟೇ ಅಲ್ಲ, ಯೂ ಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ. ಇದಕ್ಕೂ ಮೊದಲು ಕೆಜಿಎಫ್ ಟ್ರೈಲರ್ ಬಿಡುಗಡೆಯಾದಾಗಲೂ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿತ್ತು. ಸಲಾಂ ರಾಕಿ ಬಾಯ್ ಲಿರಿಕಲ್ ವಿಡಿಯೋ ಕೂಡಾ ದಾಖಲೆ ಬರೆದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಾವು