ಇಂಥಾ ಕೆಲಸ ಮಾಡಿ ನನ್ನ ಕರಿಬೇಡಿ ಎಂದು ರಾಕಿಂಗ್ ಸ್ಟಾರ್ ಯಶ್ ಬೇಸರಿದಂದಲೇ ಹೇಳಿದ್ದೇಕೆ?

ಬುಧವಾರ, 9 ಜನವರಿ 2019 (10:16 IST)
ಬೆಂಗಳೂರು: ಬರ್ತ್ ಡೇ ದಿನ ತಮ್ಮನ್ನು ನೋಡಲಾಗಲಿಲ್ಲವೆಂದು ಬೇಸರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಕಂಡು ಇನ್ಮುಂದೆ ಇಂಥಾ ಕೆಲಸ ಮಾಡಿ ನನ್ನ ಕರೀಬೇಡಿ ಎಂದು ರಾಕಿಂಗ್ ಸ್ಟಾರ್ ಯಶ್ ಬೇಸರದಿಂದಲೇ ಹೇಳಿಕೊಂಡಿದ್ದಾರೆ.


ನಿನ್ನೆ ತಮ್ಮ ಜನ್ಮದಿನವಾಗಿದ್ದರೂ ರೆಬಲ್ ಸ್ಟಾರ್ ಅಂಬರೀಶ್ ಗೌರವಾರ್ಥ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಹೀಗಂತ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಯಶ್ ಮನವಿಯನ್ನೂ ಮಾಡಿದ್ದರು.

ಆದರೂ ರವಿ ಎಂಬ ಅಭಿಮಾನಿ ಹೊಸಕೆರೆ ಹಳ್ಳಿ ನಿವಾಸಕ್ಕೆ ಬಂದಿದ್ದ. ಆದರೆ ಯಶ್ ನೋಡಲು ಸಾಧ್ಯವಾಗಲಿಲ್ಲ ಎಂಬ ಬೇಸರದಲ್ಲಿ ಅಭಿಮಾನಿ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರಿಂದ ಜೀವಕ್ಕೆ ಅಪಾಯವಾಗಿಲ್ಲ.

ಅತಿರೇಕದ ವರ್ತನೆ ತೋರಿದ ಅಭಿಮಾನಿಯ ನೋಡಲು ಆಸ್ಪತ್ರೆಗೆ ಬಂದ ಯಶ್, ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇಂತಹ ವರ್ತನೆ ಮಾಡುವ ಅಭಿಮಾನಿಗಳಿಗೆ ಖಡಕ್ಕಾಗಿ ವಾರ್ನ್ ಮಾಡಿದ್ದಾರೆ. ಇನ್ನು ಮುಂದೆ ಯಾರೇ ಹೀಗೆ ಮಾಡ್ಕೊಂಡ್ರೂ ಮತ್ತೆ ನಾನು ಬರಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೆಬಲ್ ಸ್ಟಾರ್ ಅಂಬರೀಶ್ ಪುತ್ರನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್