Select Your Language

Notifications

webdunia
webdunia
webdunia
webdunia

ಹತ್ತುಗಂಟೆಗೆ ಫ್ರೀ ಮಾಡ್ಕೊಳ್ಳಿ ಎಂದ ಯೋಗರಾಜ್ ಭಟ್ರು ಇದೇನು ಮಾಡಿಬಿಟ್ರು?!

ಯೋಗರಾಜ ಭಟ್
ಬೆಂಗಳೂರು: ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್ರು ಈಗ ಒಂದೊಂದೇ ಹಾಡು ಹರಿಯಬಿಡುತ್ತಿದ್ದಾರೆ.


ಈಗಾಗಲೇ ಶೃಂಗಾರದ ಹೊಂಗೇಮರ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ. ಅದರ ಬೆನ್ನಲ್ಲೇ ಮೊನ್ನೆಯಷ್ಟೇ ಹತ್ತುಗಂಟೆಗೆ ಫ್ರೀ ಮಾಡ್ಕೊಳ್ಳಿ ಎಂದು ತಮ್ಮದೇ ಶೈಲಿಯಲ್ಲಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಭಟ್ಟರು ಪಂಚತಂತ್ರದ ಇನ್ನೊಂದು ಹಾಡನ್ನು ಲಾಂಚ್ ಮಾಡಿದ್ದಾರೆ.

ಈ ಹಾಡು ಬಿಡುಗಡೆಗೆ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಲಾಗಿತ್ತು. ಅದೇ ಕಾರಣಕ್ಕೆ ನಿನ್ನೆ ಯೂ ಟ್ಯೂಬ್ ನಲ್ಲಿ ಹರಿಯಬಿಟ್ಟ ಒಂದೇ ಗಂಟೆಯಲ್ಲಿ ಹಾಡನ್ನು 8 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಭಟ್ಟರೇ ಬರೆದಿರುವ ‘ಈ ವಯಸ್ಸಲ್ಲಿ ಏನ್ಮಾಡೋದೋ’ ಎಂಬ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿರುವ ಮಾಸ್ ಹಾಡು ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಮುಗಿಸಿ ಬಂದ ರಣವೀರ್ ಸಿಂಗ್ ಮುಖ ಮುಚ್ಕೊಂಡಿದ್ದು ಯಾಕೆ?!