ಹನಿಮೂನ್ ಮುಗಿಸಿ ಬಂದ ರಣವೀರ್ ಸಿಂಗ್ ಮುಖ ಮುಚ್ಕೊಂಡಿದ್ದು ಯಾಕೆ?!

ಮಂಗಳವಾರ, 8 ಜನವರಿ 2019 (09:30 IST)
ಮುಂಬೈ: ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆಯವರನ್ನು ಮದುವೆಯಾಗಿ ಶ್ರೀಲಂಕಾದಲ್ಲಿ ಹನಿಮೂನ್ ಮುಗಿಸಿ ಬಂದಿರುವ ರಣವೀರ್ ಸಿಂಗ್ ಇದೀಗ ಮುಖ ಮುಚ್ಕೊಂಡು ಓಡಾಡಿದ್ದಾರೆ. ಅದೇಕೆ ಗೊತ್ತಾ?


ಅಷ್ಟಕ್ಕೂ ರಣವೀರ್ ಸಿಂಗ್ ಈ ಅವತಾರದಲ್ಲಿ ಹೋಗಿದ್ದು ಸಿನಿಮಾ ಹಾಲ್ ಗೆ. ರಣವೀರ್ ಅಭಿನಯದ ಸಿಂಬ ಚಿತ್ರ ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದೆ.

ಈ ಸಿನಿಮಾವನ್ನು ಪ್ರೇಕ್ಷಕರ ಜತೆ ಸಿನಿಮಾ ಹಾಲ್ ನಲ್ಲಿ ಕುಳಿತು ವೀಕ್ಷಿಸಲು ರಣವೀರ್ ಮುಖವೆಲ್ಲಾ ಮುಚ್ಚಿಕೊಂಡು, ಕಪ್ಪು ಬಣ್ಣದ ಸನ್ ಗ್ಲಾಸ್ ಹಾಕಿಕೊಂಡು, ಕ್ಯಾಪ್ ಹಾಕಿಕೊಂಡು ಗುರುತೇ ಸಿಗದಂತೆ ವೇಷ ಹಾಕಿಕೊಂಡು ಮುಂಬೈನ ಥಿಯೇಟರ್ ಒಂದಕ್ಕೆ ಹೋಗಿದ್ದಾರೆ. ಆದರೆ ರಣವೀರ್ ಸಿನಿಮಾ ಹಾಲ್ ನಿಂದ ಸಿನಿಮಾ ಮುಗಿಸಿ ಈ ಅವತಾರದಲ್ಲಿ ಬರುತ್ತಿರುವ ಫೋಟೋಗಳು ಕ್ಯಾಮರಾ ಕಣ್ಣಿಗೆ ಸೆರೆಯಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಾಳೆ ನನ್ನ ಬರ್ತ್ ಡೇ ಆಚರಿಸ್ಬೇಡಿ ಎಂದ ರಾಕಿಂಗ್ ಸ್ಟಾರ್ ಯಶ್: ಕಾರಣ ಕೇಳಿದ್ರೆ ಶಾಕ್!