ಅಭಿಷೇಕ್ ಬಚ್ಚನ್ ಜತೆಗೆ ನಿಶ್ಚಿತಾರ್ಥ ಫಿಕ್ಸ್ ಆಗಿದ್ದಾಗ ಐಶ್ವರ್ಯಾಗೆ ಹೃತಿಕ್ ರೋಷನ್ ಹೇಳಿದ್ದೇನು ಗೊತ್ತಾ?!

ಗುರುವಾರ, 3 ಜನವರಿ 2019 (09:59 IST)
ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಜೋಡಿ. ಈ ಜೋಡಿ ಮದುವೆಯಾಗಿ 12 ವರ್ಷವಾಗಿದೆ. ಆದರೆ 12 ವರ್ಷಗಳ ಮೊದಲು ಅಭಿಷೇಕ್ ಜತೆ ನಿಶ್ಚಿತಾರ್ಥದ ಸುದ್ದಿ ಲೀಕ್ ಆದಾಗ ಸಹನಟ ಹೃತಿಕ್ ರೋಷನ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಸ್ವತಃ ಐಶ್ವರ್ಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


ಐಶ್ವರ್ಯಾ ಆಗ ಜೋಧಾ ಅಕ್ಬರ್ ಸಿನಿಮಾದಲ್ಲಿ ಹೃತಿಕ್ ಜತೆಗೆ ಅಭಿನಯಿಸುತ್ತಿದ್ದರು. ಅಭಿಷೇಕ್ ಜತೆಗೆ ವಿವಾಹ ನಿಶ್ಚಿತಾರ್ಥದ ಸುದ್ದಿ ಬಹಿರಂಗವಾದ ದಿನ ಐಶ್ವರ್ಯಾ ಜೋಧಾ ಅಕ್ಬರ್ ಸಿನಿಮಾ ‘ಖ್ವಾಜಾ ಮೇರೇ ಖ್ವಾಜಾ’ ಹಾಡಿನ ಶೂಟಿಂಗ್ ನಲ್ಲಿದ್ದರಂತೆ. ಆ ಹಾಡು ಜೋಧಾ ಮತ್ತು ಅಕ್ಬರ್ ನಡುವಿನ ವಿವಾಹದ ದೃಶ್ಯ.

ಆ ಹಾಡಿನ ಚಿತ್ರೀಕರಣಕ್ಕಾಗಿ ಐಶ್ವರ್ಯಾ ವಧುವಿನ ಅವತಾರದಲ್ಲಿದ್ದರಂತೆ. ‘ಒಂದು ಕಡೆ ಹೃತಿಕ್ ನನ್ನ ನೋಡಿ ಭಾರೀ ಉತ್ಸಾಹದಲ್ಲಿ ಥಮ್ಸ್ ಅಪ್ ಮಾಡುತ್ತಿದ್ದಾರೆ. ನಾನು ಅಯ್ಯೋ ಆಫ್ ಸ್ಕ್ರೀನ್, ಆನ್ ಸ್ಕ್ರೀನ್ ಎರಡರಲ್ಲೂ ನನ್ನ ಪರಿಸ್ಥಿತಿ ಒಂದೇ ರೀತಿ ಇದೆ ಎಂದು ಯೋಚಿಸುತ್ತಿದ್ದೆ’ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಭಿಷೇಕ್ ಬಚ್ಚನ್ ಜತೆಗೆ ನಿಶ್ಚಿತಾರ್ಥ ಫಿಕ್ಸ್ ಆಗಿದ್ದಾಗ ಐಶ್ವರ್ಯಾಗೆ ಹೃತಿಕ್ ರೋಷನ್ ಹೇಳಿದ್ದೇನು ಗೊತ್ತಾ?!