Select Your Language

Notifications

webdunia
webdunia
webdunia
Friday, 11 April 2025
webdunia

ನರ್ಗೀಸ್ ದತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಐಶ್ವರ್ಯಾ ರೈ ಬಚ್ಚನ್!??

ನರ್ಗೀಸ್ ದತ್
ಬೆಂಗಳೂರು , ಮಂಗಳವಾರ, 4 ಸೆಪ್ಟಂಬರ್ 2018 (15:56 IST)
ಕರಣ್ ಜೋಹರ್ ಅವರ 'ಏ ದಿಲ್ ಹೈ ಮುಶ್ಕಿಲ್' ಚಿತ್ರದಲ್ಲಿ ಮನಮೋಹಕ ಪಾತ್ರವನ್ನು ಮಾಡುವ ಮೂಲಕ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿದ ಐಶ್ವರ್ಯಾ ರೈ ಬಚ್ಚನ್, ಸಾಲು ಸಾಲಾಗಿ ಚಿತ್ರಗಳನ್ನು ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ‘ಫನ್ನೆ ಖಾನ್’ ಚಿತ್ರದಲ್ಲಿ ಅಭಿನಯಿಸಿ ಇದೀಗ ಪತಿ ಅಭಿಷೇಕ್ ಬಚ್ಚನ್ ಜೊತೆ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದರ ಜೊತೆಗೆ ಐಶ್ವರ್ಯಾ ರೈ ಬಚ್ಚನ್ 1967 ರ 'ರಾತ್ ಔರ್ ದಿನ್' ರಿಮೇಕ್‌ನಲ್ಲಿ ಸಂಜಯ್ ದತ್ ತಾಯಿ ನರ್ಗೀಸ್ ನಟಿಸಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ಧಿ ಕೇಳಿ ಬರುತ್ತಿದೆ.
 
ಮೂಲಗಳ ಪ್ರಕಾರ ಐಶ್ವರ್ಯಾ ಚಿತ್ರದಲ್ಲಿ ಮಲ್ಟಿಪಲ್ ಪರ್ಸನಾಲಿಟಿ ಡಿಸ್ಆರ್ಡರ್‌ನಿಂದ ಬಳಲುತ್ತಿರುವ ಮಹಿಳಾ ಪಾತ್ರವನ್ನು ವಹಿಸಲಿದ್ದಾರೆ. ಈ ಚಿತ್ರವನ್ನು ಪ್ರೀರನಾ ಅರೋರಾ ಮತ್ತು ಅರ್ಜುನ್ ಎನ್ ಕಪೂರ್ ನಿರ್ಮಿಸಿದ್ದಾರೆ.
 
ಇದರ ಕುರಿತು ಮಾತನಾಡಿದ ಐಶ್ವರ್ಯಾ '2005 ರಲ್ಲಿನ ‘ಶಬ್ಧ್’ ಚಿತ್ರದ ಸಮಯದಲ್ಲಿ ಸಂಜಯ್ ‘ದಿನ್ ಔರ್ ರಾತ್’ ಮತ್ತು ‘ವೋ ಕೌನ್ ತಿ’ ಬಗ್ಗೆ ಮಾತನಾಡಿದ್ದರು. ಒಂದು ವೇಳೆ ‘ದಿನ್ ಔರ್ ರಾತ್’ ಚಿತ್ರ ಮತ್ತೆ ಬಂದರೆ ಅಮ್ಮನ ಪಾತ್ರದಲ್ಲಿ ನೀನು ನಟಿಸಬೇಕು ಎಂದಿದ್ದರು. ನಾನು ಅವರ ತಾಯಿಯ ಪಾತ್ರವನ್ನು ವಹಿಸಬಹುದೆಂದು ಅವರು ನಂಬಿದ್ದರಿಂದ ನನಗೆ ಸಂತೋಷವಾಯಿತು' ಎಂದು ಹೇಳಿದ್ದಾರೆ.
 
ಇದಲ್ಲದೆ ಬಾಡಿಗೆ ತಾಯಿ ಕಥೆಯಾಧಾರಿತ ‘ವೋ ಕೌನ್ ತಿ’ ಚಿತ್ರದಲ್ಲಿ ಶಾಹಿದ್ ಕಪೂರ್ ಸಂಗಾತಿಯಾಗಿ ಐಶ್ವರ್ಯಾ ರೈ ಬಚ್ಚನ್ ನಟಿಸುವ ಸಾಧ್ಯತೆ ಇದೆ ಎಂಬ ಸುದ್ಧಿ ಕೇಳಿ ಬರುತ್ತಿದೆ. ಎರಡೂ ಚಿತ್ರಗಳು ತುಂಬಾ ಆಸಕ್ತಿದಾಯಕವಾಗಿದ್ದು, ಈ ಚಿತ್ರಗಳಲ್ಲಿ ನಟಿಸಲು ಉತ್ಸುಕಳಾಗಿದ್ದೇನೆಂದು ಐಶ್ ಹೇಳಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀನೇ ನನ್ನ ಫಸ್ಟ್ ಗರ್ಲ್‌ಫ್ರೆಂಡ್ ಅಂತಾ ಇರೋ ಚಂದನ್ ಶೆಟ್ಟಿ..!!