Select Your Language

Notifications

webdunia
webdunia
webdunia
webdunia

ಕರಣ್ ಜೋಹರ್ ತಮ್ಮನ್ನು ‘ಪ್ಲಾಪ್ ಆಕ್ಟರ್’ ಎಂದಿದ್ದು ಯಾಕೆ?

ಕರಣ್ ಜೋಹರ್ ತಮ್ಮನ್ನು ‘ಪ್ಲಾಪ್ ಆಕ್ಟರ್’ ಎಂದಿದ್ದು ಯಾಕೆ?
ಮುಂಬೈ , ಸೋಮವಾರ, 7 ಮೇ 2018 (06:31 IST)
ಮುಂಬೈ : ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿ , ಕೆಲವು ಸಿನಿಮಾಗಳಲ್ಲಿ ತಾವೇ ನಟಿಸಿದ್ದರೂ ಕೂಡ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮನ್ನು ‘ಪ್ಲಾಪ್ ಆಕ್ಟರ್’  ಎಂದೇ ಬಿಂಬಿಸಿಕೊಂಡಿದ್ದು, ಇದಕ್ಕೆ ಕಾರಣವೆನೆಂಬುದನ್ನು ಕೂಡ ಸ್ವತಃ ಅವರೇ ತಿಳಿಸಿದ್ದಾರೆ.


ಕರಣ್ ಜೋಹರ್ ಅವರು ತಮ್ಮ ನಿರ್ಮಾಣದ ಮರಾಠಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು, ಆಗ ಪತ್ರಕರ್ತರು, ನೀವ್ಯಾಕೆ ಪೂರ್ಣಪ್ರಮಾಣದ ನಟನಾಗಬಾರದು, ಮರಾಠಿ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿದರೆ ನಟಿಸುತ್ತೀರಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಕರಣ್ ಜೀಹರ್ ಅವರು,’ ನಾನು ಒಬ್ಬ ಬಿಗ್ ಪ್ಲಾಪ್ ಆಕ್ಟರ್ ಎಂದಿದ್ದಾರೆ. ನನ್ನ ಅಭಿನಯದ ಯಾವುದೇ ಚಿತ್ರಗಳು ಕಲೆಕ್ಷನ್ ಮಾಡಿಲ್ಲ. ನಾನು ಬಾಂಬೆ , ವೆಲ್ವೆಟ್ ಮತ್ತು ವೆಲ್ ಕಮ್ ಟು ನ್ಯೂಯಾರ್ಕ್ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಯಾವುದೇ ಚಿತ್ರಗಳು ಯಶಸ್ಸು ಕಂಡಿಲ್ಲ. ಹೀಗಾಗಿ ಯಾವುದೇ ನಿರ್ಮಾಪಕರು ನನ್ನನ್ನು ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುತ್ತಿಲ್ಲ. ನನಗೂ ಇಷ್ಟವಿಲ್ಲ. ನಾನು ಸಿನಿಮಾದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಕೂಡ ಇಷ್ಟಪಡುತ್ತಿಲ್ಲ. ನಾನೊಬ್ಬ ಬಿಗ್ ಪ್ಲಾಪ್ ನಟ. ಹೀಗಾಗಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿ ಬಗ್ಗೆ ನಟಿ ಸಂಜನಾ ಹೇಳಿದ್ದೇನು?