Select Your Language

Notifications

webdunia
webdunia
webdunia
webdunia

ಕಪಿಲ್‌ ಶರ್ಮಾ ಪತ್ರಕರ್ತ ವಿಕ್ಕಿ ಲಲ್ವಾನಿ ವಿರುದ್ಧ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದು ಯಾಕೆ?

ಕಪಿಲ್‌ ಶರ್ಮಾ ಪತ್ರಕರ್ತ ವಿಕ್ಕಿ ಲಲ್ವಾನಿ ವಿರುದ್ಧ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದು ಯಾಕೆ?
ಮುಂಬೈ , ಶುಕ್ರವಾರ, 4 ಮೇ 2018 (06:54 IST)
ಮುಂಬೈ : ಇತ್ತೀಚೆಗೆ ವಿಕ್ಕಿ ಲಲ್ವಾನಿ ತಮ್ಮ ಅರ್ಟಿಕಲ್‌ನಲ್ಲಿ ಕಪಿಲ್‌ ಶರ್ಮಾ ಒಬ್ಬ 'ವಿಫಲ ನಟ' ಮತ್ತು 'ಹತೋಟಿಯಲ್ಲಿಲ್ಲದ ಸೆಲೆಬ್ರಿಟಿ' ಎಂದು ಬರೆದಿರುವುದಾಗಿ ಆರೋಪಿಸಿ ಹಿಂದಿ ಭಾಷೆಯ ಖ್ಯಾತ ಕಾಮಿಡಿಯನ್‌ ಕಪಿಲ್‌ ಶರ್ಮಾ ಅವರು ಪತ್ರಕರ್ತ ವಿಕ್ಕಿ ಲಲ್ವಾನಿ ವಿರುದ್ಧ ಮಾನ ನಷ್ಟ ಮೊಕದ್ದಮೆ ಅಡಿಯಲ್ಲಿ ಕಾನೂನಿನ ಪ್ರಕಾರ ನೋಟಿಸ್ ಜಾರಿ ಮಾಡಿದ್ದಾರೆ.


ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಕಪಿಲ್‌ ಶರ್ಮಾ ಮತ್ತು ವಿಕ್ಕಿ ಲಲ್ವಾನಿ ಪರಸ್ಪರ ಕಿತ್ತಾಡಿಕೊಂಡಿದ್ದು, ಪತ್ರಕರ್ತ ವಿಕ್ಕಿ ಲಲ್ವಾನಿ ನನ್ನಘನತೆಗೆ ಧಕ್ಕೆ ತರುವಂತ ವರದಿಯನ್ನು ಪತ್ರಿಕಾ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಒಂದು ವಾರದೊಳಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಮತ್ತು ಮಾನಹಾನಿ ಮಾಡಿದ್ದಕ್ಕೆ 100 ಕೋಟಿ ರೂಪಾಯಿ ನೀಡಬೇಕೆಂದು ಕಪಿಲ್‌ ಶರ್ಮಾ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಬೇಬಿ ಅನುಷ್ಕಾ ಮೇಲೆ ಬಿಗ್ ಬಿ ಅಮಿತಾಬ್ ಗೆ ಬೇಸರ ಯಾಕಂತೆ..?