Select Your Language

Notifications

webdunia
webdunia
webdunia
webdunia

ಜನ್ಮದಿನದಂದು ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡ ನಟಿ ಅನುಷ್ಕಾ ಶರ್ಮಾ

ಜನ್ಮದಿನದಂದು ಒಂದು ಮಹತ್ತರವಾದ  ನಿರ್ಧಾರವನ್ನು ತೆಗೆದುಕೊಂಡ ನಟಿ ಅನುಷ್ಕಾ ಶರ್ಮಾ
ಮುಂಬೈ , ಗುರುವಾರ, 3 ಮೇ 2018 (06:58 IST)
ಮುಂಬೈ : ಮೇ 1 ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಜನ್ಮದಿನದಂದು ಒಂದು ಮಹತ್ತರವಾದ  ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.


ಹೌದು. ಪಶು ಪ್ರೇಮಿಯಾದ ನಟಿ ಅನುಷ್ಕಾ ಶರ್ಮಾ ಅವರು ಬೀದಿಗಳಲ್ಲಿ ಅನಾಥವಾಗಿ ಓಡಾಡಿಕೊಂಡಿರುವ ನಾಯಿ, ಪಶುಗಳಿಗೆ ತಾನು ಏನಾದರೂ ಮಾಡಬೇಕು ಎಂದು ಕನಸು ಕಂಡಿದ್ದು, ಇದೀಗ ಅವುಗಳಿಗಾಗಿ ಆಸರೆ ಕೇಂದ್ರವೊಂದನ್ನು ತಾನು ನಿರ್ಮಿಸುವುದಾಗಿ ಹೇಳಿದ್ದಾರೆ.


‘ಮುಂಬಯಿ ಹೊರವಲಯದಲ್ಲಿ ನಾನೊಂದು ಪಶು ಆಸರೆ ಕೇಂದ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇನೆ. ಅನಾಥವಾಗಿ, ಯಾರಿಗೂ ಬೇಡವಾಗಿ, ಬೀದಿಗಳಲ್ಲಿ ಅತ್ಯಂತ ಕಠಿನ ಸ್ಥಿತಿಯಲ್ಲಿ ಅಡ್ಡಾಡಿಕೊಂಡಿರುವ ಮೂಕ ಪ್ರಾಣಿ ಪಶುಗಳಿಗೆ ಪ್ರೀತಿ, ರಕ್ಷಣೆ, ಪೋಷಣೆ ಸಿಗುವ ಕೇಂದ್ರ ಅದಾಗಿರುತ್ತದೆ. ಮನುಷ್ಯರ ಹಾಗೆ ಬಲಿಷ್ಠವಲ್ಲದ ಮೂಕ ಪ್ರಾಣಿಗಳ ಬಗ್ಗೆ ಜನರು ದಯೆತೋರಿ ಅವುಗಳನ್ನು ರಕ್ಷಿಸಿ ಪೋಷಿಸುವ ಆಸಕ್ತಿಯನ್ನು ಜನರು ತೋರಬೇಕು’ ಎಂದು ನಟಿ ಅನುಷ್ಕಾ ಶರ್ಮಾ ಅವರು ತಿಳಿಸಿದ್ದಾರೆ. ಹಾಗೇ ಈ ನಿರ್ಧಾರ ಕೈಗೊಳ್ಳಲು ತನಗೆ ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಪ್ರೇರಣೆಯಾಗಿದ್ದಾರೆ ಎಂಬುದಾಗಿ ಕೂಡ ಅನುಷ್ಕಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾದ ಚಿರು-ಮೇಘನಾ ಜೋಡಿ