Select Your Language

Notifications

webdunia
webdunia
webdunia
webdunia

ಕೊನೆಗೂ ರೋಹಿತ್ ಶರ್ಮಾಗೆ ಚಳ್ಳೆ ಹಣ್ಣು ತಿನ್ನಿಸಲು ಯಶಸ್ವಿಯಾದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಬೆಂಗಳೂರು , ಬುಧವಾರ, 2 ಮೇ 2018 (10:02 IST)
ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕೊನೆಗೂ ಅಪರೂಪಕ್ಕೆ ಜಯ ದೊರಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಆರ್ ಸಿಬಿ ಮುಂಬೈ ವಿರುದ್ಧ 14 ರನ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಆರ್ ಸಿಬಿ ಪರ ವೋಹ್ರಾ 45, ಬ್ರೆಂಡಮ್ ಮೆಕ್ ಲಮ್ 37, ವಿರಾಟ್ ಕೊಹ್ಲಿ 32 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಿತ್ತರು.

20 ಕ್ರಿಕೆಟ್ ಗೆ ಹೋಲಿಸಿದರೆ ಇದು ಕಡಿಮೆ ಮೊತ್ತವೆನಿಸಿದರೂ ಮುಂಬೈ ಇಂಡಿಯನ್ಸ್ ಗೆ ಬ್ಯಾಟಿಂಗ್ ಕೈ ಕೊಟ್ಟಿತು. ವಿಶೇಷವಾಗಿ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದ್ದು, ಆಘಾತವುಂಟುಮಾಡಿತು. ಅದೇನೇ ಇರಲಿ, ಹಲವು ಪಂದ್ಯಗಳ ನಂತರ ಸಿಕ್ಕ ಗೆಲುವನ್ನು ಆರ್ ಸಿಬಿ ಅಭಿಮಾನಿಗಳು ಎಂಜಾಯ್ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯಿಂದ ಸಿಗದ ಗೌರವ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದಿಂದ ಸಿಕ್ಕಿತು!