Select Your Language

Notifications

webdunia
webdunia
webdunia
webdunia

ಮದುವೆಯ ರೂಮರ್ಸ್ ಗೆ ತೆರೆ ಎಳೆದ ನಟಿ ಪ್ರಿಯಾಂಕ

ಮದುವೆಯ ರೂಮರ್ಸ್ ಗೆ ತೆರೆ ಎಳೆದ ನಟಿ ಪ್ರಿಯಾಂಕ
ಮುಂಬೈ , ಬುಧವಾರ, 2 ಮೇ 2018 (10:38 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ತಮ್ಮ ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸಿರುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆಯಾಗಿದ್ದು, ಇದೀಗ ಸ್ವತಃ ನಟಿ ಪ್ರಿಯಾಂಕ ಅವರೇ ಇದನ್ನು ಧರಿಸಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.


ಪ್ರಿಯಾಂಕಾ ಛೋಪ್ರಾ ತಮ್ಮ ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸಿರುವ ಹಾಗೆ ಕಾಣುವ ಫೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದು, ಪ್ರಿಯಾಂಕಾ ಛೋಪ್ರಾ ಅವರು ಗುಟ್ಟಾಗಿ ಮದುವೆ ಆದ್ರಾ ಎಂಬ ಸಂದೇಹ ಹಲವರಲ್ಲಿ ಮೂಡಿತ್ತು. ಅದನ್ನು ಬಗೆಹರಿಸಿಕೊಳ್ಳಲು ಅನೇಕರು ಪ್ರಿಯಾಂಕ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರಿಯಾಂಕ ಅವರು ಮಾತ್ರ ಯಾವುದೇ ಉತ್ತರ ನೀಡಿರಲಿಲ್ಲ.


ಆದರೆ ಇದೀಗ  ಪ್ರತಿಕ್ರಿಯಿಸಿದ ನಟಿ ಪ್ರಿಯಾಂಕ ಅವರು,’ ಕೆಟ್ಟ ದೃಷ್ಟಿ ಬೀಳದಂತೆ ಧರಿಸಿರುವ ಕರಿಮಣಿ ಸರ ಇದು. ನಾನು ಮದುವೆಯಾದರೆ ಖಂಡಿತ ತಿಳಿಸುತ್ತೇನೆ. ಇದರಲ್ಲಿ ರಹಸ್ಯವೇನು ಇಲ್ಲ' ಎಂದು ಹೇಳುವ ಮೂಲಕ ತಮ್ಮ ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?