Publish Date: Fri, 04 May 2018 (06:49 IST)
Updated Date: Fri, 04 May 2018 (06:52 IST)
ಮುಂಬೈ : ಮೇ1 ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮೇಲೆ ಬಾಲಿವುಡ್ ನ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು. ತಮ್ಮ ಹುಟ್ಟುಹಬ್ಬವನ್ನು ಪತಿ ಕೊಹ್ಲಿ ಅವರ ಜೊತೆ ಸಂಭ್ರಮಿಸುತ್ತಿದ್ದ ನಟಿ ಅನುಷ್ಕಾ ಅವರಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವು ಮಂದಿ ಗಣ್ಯರು ಶುಭಕೋರಿದ್ದರು. ಹಾಗೇ ಅಮಿತಾಬ್ ಬಚ್ಚನ್ ಅವರು ಕೂಡ ಅನುಷ್ಕಾ ಗೆ ಜನ್ಮದಿನದ ಶುಭಾಷೇಯ ಕೋರಿದ್ದರು. ಆದರೆ ಅನುಷ್ಕಾ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದಿದ್ದು ಬಿಗ್ ಬಿ ಗೆ ಬೇಸರ ತಂದಿದೆ.
ಈ ಬಗ್ಗೆ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವೀಟರ್ ನಲ್ಲಿ,’ ಅನುಷ್ಕಾ.. ಇದು ಅಮಿತಾಬ್ ಬಚ್ಚನ್. ನಿನಗೆ ಮೇ 1ರಂದು ಎಸ್ ಎಂಎಸ್ ಮೂಲಕ ಶುಭಕೋರಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ನೀನು ನಂಬರ್ ಬದಲಾಯಿಸಿರಬಹುದು ಎಂದುಕೊಂಡು, ಮತ್ತೊಮ್ಮೆ ಗ್ರೀಟಿಂಗ್ ಕಳುಹಿಸಿದ್ದೆ. ಆದರೆ ನೀನು ಐಪಿಎಲ್ ಮ್ಯಾಚ್ ನಲ್ಲಿ ಬ್ಯುಸಿಯಾಗಿದ್ದು ಗೊತ್ತಾಯಿತು’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಶರ್ಮಾ, ‘ಥ್ಯಾಕ್ಯೂ ಸೋ ಮಚ್ ಸರ್. ನನ್ನ ಹುಟ್ಟುಹಬ್ಬವನ್ನು ನೆನಪಿನಲ್ಲಿಟ್ಟುಕೊಂಡು ಶುಭಕೋರಿದ್ದಕ್ಕೆ (ನಿಮ್ಮ ಎಸ್ ಎಂ ಎಸ್ ಗೆ ಪ್ರತಿಯಾಗಿ ನಾನು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದೇನೆ)’ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ