Select Your Language

Notifications

webdunia
webdunia
webdunia
webdunia

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ವಿರಾಟ್ ಕೊಹ್ಲಿ

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ವಿರಾಟ್ ಕೊಹ್ಲಿ
ಬೆಂಗಳೂರು , ಗುರುವಾರ, 3 ಮೇ 2018 (09:37 IST)
ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮೊನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ದಾಖಲಿಸಿತ್ತು. ಈ ಗೆಲುವನ್ನು ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.

ಅನುಷ್ಕಾ ಹುಟ್ಟುಹಬ್ಬದ ದಿನದಂದೇ ಕೊಹ್ಲಿಗೆ ಈ ಗೆಲುವು ದಕ್ಕಿತ್ತು. ಹೀಗಾಗಿ ಅಪರೂಪದ ಗೆಲುವನ್ನು ತಮ್ಮ ಮುದ್ದಿನ ಮಡದಿಗೆ ಅರ್ಪಿಸಿದ್ದಾರೆ.

‘ಇದು ನಮಗೆ ಅಪೂರ್ವ ಗೆಲುವಾಗಿತ್ತು. ನನ್ನ ಪತ್ನಿ ಇಲ್ಲಿಯೇ ಇದ್ದಾಳೆ ಮತ್ತು ಇವತ್ತು ಅವಳ ಜನ್ಮದಿನ. ಇದು ಅವಳಿಗೆ ನನ್ನ ಚಿಕ್ಕ ಉಡುಗೊರೆ. ಅವಳ ಎದುರು ಈ ಅಮೂಲ್ಯ ಅಂಕ ಗಳಿಸುವುದು ನನಗೆ ಮುಖ್ಯವಾಗಿತ್ತು’ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸ ನಡೆಸುತ್ತಿರುವ ಪುತ್ರನ ಓಡಲು ದೂರದೂರಿಗೆ ಬಂದ ಸಚಿನ್ ತೆಂಡುಲ್ಕರ್