Publish Date: Sun, 06 May 2018 (07:52 IST)
Updated Date: Sun, 06 May 2018 (07:54 IST)
ಬೆಂಗಳೂರು : ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಸಿಟಿ ಕೂಡ ಮಹಿಳೆಯರಿಗೆ ಸೇಫ್ ಅಲ್ಲ ಎಂದು ಹಲವರು ಆರೊಪಿಸಿದ್ದಕ್ಕೆ ಇದೀಗ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೆಣ್ಣು ಮಕ್ಕಳ ವಿರುದ್ಧ ಹಲವರು ಅಪವಾದ ಎತ್ತಿದ್ದಾಗ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾಣಿ ಅವರು,’ ಎಷ್ಟು ಹೊತ್ತಲ್ಲೂ ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದ್ರೂ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡಬಹುದು. ನಾನೇ ಎಷ್ಟೋ ಸಲ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿ ಸೇಫ್ ಆಗಿ ವಾಪಸ್ ಬಂದಿದ್ದೇನೆ. ದೆಹಲಿ ಹಾಗೂ ಕೋಲ್ಕತ್ತಾದಂತಹ ನಗರಗಳಿಗೆ ನಮ್ಮ ಬೆಂಗಳೂರನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ