Publish Date: Sat, 05 May 2018 (09:11 IST)
Updated Date: Sat, 05 May 2018 (09:12 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಮೈಸೂರಿನ ಭಾಸ್ಕರ್ ರೆಡ್ಡಿ ಎಂಬವರು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದು, ದರ್ಶನ್ ಬರುವವರೆಗೂ ಅಂತ್ಯಸಂಸ್ಕಾರವಿಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.
ಭಾಸ್ಕರ ರೆಡ್ಡಿ ಎಂಬವರು ದರ್ಶನ್ ರ ದೊಡ್ಡ ಅಭಿಮಾನಿ. ದರ್ಶನ್ ನೋಡಬೇಕೆಂದು ಬಯಸಿದ್ದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ತೀವ್ರ ಖಿನ್ನತೆಗೊಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೀಗ ದರ್ಶನ್ ಆಗಮನಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಕಾಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ಬಂದ ನಂತರವೇ ಅಂತಿಮ ಕ್ರಿಯೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.