Publish Date: Sat, 05 May 2018 (08:13 IST)
Updated Date: Sat, 05 May 2018 (08:17 IST)
ಮೈಸೂರು : ಈ ಬಾರಿ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ ನಟ ಸುದೀಪ್ ಅವರು ಈಗಾಗಲೇ ಪ್ರಚಾರ ಮಾಡಲಿರುವುದಾಗಿ ತಿಳಿದುಬಂದಿದ್ದು, ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸಿಎಂ ಪರವಾಗಿ ಶನಿವಾರ (ಇಂದು) ಪ್ರಚಾರ ಮಾಡಲಿದ್ದಾರಂತೆ.
ನಟ ದರ್ಶನ್ ಅವರು ಮೂಲತಃ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕೂಡ ಕಾಂಗ್ರೆಸ್ ಮುಖಂಡರಾಗಿರುವುದರಿಂದ ದರ್ಶನ್ ಅವರು ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರಂತೆ. ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗುವ ದರ್ಶನ್ ಅವರ ಪ್ರಚಾರ ರಾತ್ರಿ 7.30ರ ವರೆಗೆ ಮುಂದುವರೆಯಲಿದ್ದು, ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ