Publish Date: Sat, 05 May 2018 (08:03 IST)
Updated Date: Sat, 05 May 2018 (08:05 IST)
ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಯವರನ್ನು ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ್ದ ಫೋಟೋ ವೈರಲ್ ಆಗಿತ್ತು. ಆದರೆ ಈ ಭೇಟಿಯ ಹಿಂದಿನ ವ್ಯವಸ್ಥೆ ಯಾರದ್ದು ಗೊತ್ತಾ?
ಪುನೀತ್ ಗೆ ಮೋದಿ ಭೇಟಿ ಮಾಡಿಸಿದ್ದು ನವರಸನಾಯಕ, ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಅಂತೆ! ಹಾಗಂತ ಅವರೇ ಅಭಿಮಾನಿಯೊಬ್ಬರಿಗೆ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
‘ನಾನೇ ಈ ಭೇಟಿಗೆ ವ್ಯವಸ್ಥೆ ಮಾಡಿಸಿದ್ದು. ಮಾರ್ಚ್ 17 ರಂದು ನಾವಿಬ್ಬರು ಹುಟ್ಟಿದ ಒಂದೆ ದಿನ ಭೇಟಿ ಮಾಡುವ ಉದ್ದೇಶ. ಅಪ್ಪು ನಮ್ಮ ಯಜಮಾನರ ಮುದ್ದಿನ ಮಗ. ನನ್ನ ನೆಚ್ಚಿನ ಸಹೋದರ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.