Publish Date: Sat, 05 May 2018 (07:03 IST)
Updated Date: Sat, 05 May 2018 (07:05 IST)
ಬೆಂಗಳೂರು : ಇತ್ತೀಚೆಗೆ ಫ್ರೆಂಡ್ ಶಿಪ್ ಗೆ ಸಂಬಂಧಿಸಿದ ವಿಚಾರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಅವರು ಬಾರೀ ಸುದ್ದಿಯಲ್ಲಿದ್ದು, ಇದೀಗ ಮತ್ತೆ ದರ್ಶನ್ ಅವರ ಬಗ್ಗೆ ಸುದೀಪ್ ಅವರು ಬಹಿರಂಗವಾಗಿ ಮಾತನಾಡಿದ್ದಾರೆ.
ಈ ಹಿಂದೆ ಟ್ವಿಟ್ಟರ್ ನಲ್ಲಿ ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್ ಅವರ ಇದೀಗ ಮತ್ತೆ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ‘ಫ್ರೆಂಡ್ ಆಗಿರೋದಕ್ಕೆ ದಿನವೂ ಭೇಟಿ ಆಗಲೇಬೇಕು ಅಂತೇನಿಲ್ಲ. ಗೆಳೆಯನಿಗೆ ಒಳ್ಳೆದಾಗ್ಲಿ ಅನ್ನೋ ಹಾರೈಕೆ ಮನದಲ್ಲಿದ್ದರೆ ಸಾಕಲ್ವಾ ಅದು ಯಾವತ್ತು ಇರುತ್ತದೆ. ಫ್ರೆಂಡ್ ಅಂದ್ರೆ ಯಾವಾಗಲೂ ಒಳ್ಳೆಯದನ್ನು ಬಯಸುವವನು. ದರ್ಶನ್ ಯಾವತ್ತು ನನ್ನ ಫ್ರೆಂಡ್. ಫ್ರೆಂಡ್ ಶಿಪ್ ನಲ್ಲಿ ಅಜೆಂಡಾ ಇರಬಾರದು. ಬದುಕಿನ ತುಂಬಾ ಪ್ಲಾನ್ ಗಳಿರಬಾರದು’ ಎಂದು ಸುದೀಪ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ