Select Your Language

Notifications

webdunia
webdunia
webdunia
webdunia

ಕನ್ನಡದ ಈ ಸ್ಟಾರ್ ನಟ ಡಾ. ರಾಜಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಗೆ ಸಮವಂತೆ

webdunia
ಬೆಂಗಳೂರು , ಶನಿವಾರ, 5 ಮೇ 2018 (06:48 IST)
ಬೆಂಗಳೂರು : ನಟ ಶಂಕರ್ ಅಶ್ವಥ್ ಅವರು ಇದೀಗ ಕನ್ನಡದ ಸ್ಟಾರ್ ನಟರೊಬ್ಬರನ್ನು ಡಾ. ರಾಜಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರಿಗೆ ಹೋಲಿಸಿದ್ದಾರೆ.


ಕನ್ನಡದ ಹಿರಿಯ ನಟ ಅಶ್ವಥ್ ಅವರ  ಮಗ ನಟ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಆಫರ್ ಗಳು ಸಿಗದೇ ಜೀವನ ಸಾಗಿಸಲು ಉಬರ್ ಕ್ಯಾಬ್ ಡ್ರೈವರ್ ಆಗಿದ್ದರು. ಈ ವಿಷಯ ತಿಳಿದ ನಟ ದರ್ಶನ್ ಅವರು  ಶಂಕರ್ ಅಶ್ವಥ್ ಅವರಿಗೆ ಯಜಮಾನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು. ಇದರಿಂದ ಸಂತೋಷಗೊಂಡ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜ್‍ಕುಮಾರ್, ವಿಷ್ಣುವರ್ಧನ್‍ ಅವರಿಗೆ ಸಮ  ಎಂದು ಫೇಸ್‍ಬುಕ್ ಪೇಜ್‍ವೊಂದರಲ್ಲಿ ರಾಜ್‍ಕುಮಾರ್, ವಿಷ್ಣುವರ್ಧನ್, ದರ್ಶನ್‍ ಅವರ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ.


ಹಾಗೇ ಎಲ್ಲರಲ್ಲೂ ಪರಮಾತ್ಮ ಇರುತ್ತಾನೆ. ಆತನನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು ಎಂದು ನನ್ನ ತಂದೆ ಹೇಳುತ್ತಿದ್ದರು. ಆ ಮೂರು ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ ಎಂದು ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಘು ಮುಖರ್ಜಿ ಹಾಗೂ ಅನುಪ್ರಭಾಕರ್ ದಂಪತಿ ಕಡೆಯಿಂದ ಬಂದ ಸಿಹಿಸುದ್ದಿ ಏನು ಗೊತ್ತಾ...?