ಸಿಡ್ನಿ: ಟೀಂ ಇಂಡಿಯಾವನ್ನು ಸ್ವದೇಶದಲ್ಲೇ ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಇದೀಗ ವಿಶ್ವ ನಂ.1 ತಂಡದ ಮೇಲೆ ಒಂದು ಕಣ್ಣು ಬಿದ್ದಿದೆ!
									
			
			 
 			
 
 			
					
			        							
								
																	ಸದ್ಯಕ್ಕೆ ಬಾಲ್ ಟೆಂಪರಿಂಗ್ ಕಳಂಕದಿಂದ ಮರ್ಯಾದೆ ಹರಾಜಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕವಾಗಿದೆ. ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
									
										
								
																	ಅವರಗೀಗ ಭಾರತ ತಂಡವನ್ನು ಭಾರತದಲ್ಲೇ ಸೋಲಿಸುವುದೇ ಗುರಿಯಾಗಿದೆ. ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಲ್ಯಾಂಗರ್ ‘ಭಾರತವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದೇ ಆಸ್ಟ್ರೇಲಿಯಾ ತಂಡದ ಅಂತಿಮ ಗುರಿ’ ಎಂದಿದ್ದಾರೆ. ಈ ಮೂಲಕ ಕೊಹ್ಲಿ ಬಳಗಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.