Publish Date: Thu, 03 May 2018 (21:50 IST)
Updated Date: Thu, 03 May 2018 (21:51 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಕಿಚ್ಚ ಸುದೀಪ್ ನಡುವಿನ ಸಂಧಾನ ಕೊನೆಗೂ ಫಲ ಕೊಟ್ಟಿದೆ. ಕಿಚ್ಚನ ರಾಜಕೀಯ ಜರ್ನಿಗೆ ಈ ಮೂಲಕ ಚಾಲನೆ ಸಿಕ್ಕಿದೆ.
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಇದೀಗ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಖಚಿತಪಡಿಸಿದೆ.
ಬಾದಾಮಿ ಜತೆಗೆ ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಪ್ರಚಾರ ನಡೆಸಲು ಸುದೀಪ್ ಬಳಿ ಕೇಳಿಕೊಳ್ಳಲಾಗಿದ್ದು, ಸಮಯ ಸಿಕ್ಕರೆ ಅಲ್ಲೂ ಪ್ರಚಾರ ನಡೆಸುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೇ ಕಿಚ್ಚ ಕಾಂಗ್ರೆಸ್ ಪಾಳಯ ಸೇರಿಕೊಂಡರು ಎಂದುಕೊಳ್ಳಬೇಕಾಗಿಲ್ಲ. ಸುರಪುರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ಪರವೂ ಸುದೀಪ್ ಪ್ರಚಾರ ಮಾಡಲಿದ್ದಾರೆ. ‘ನಾನು ಕಲಾವಿದ. ನನಗೆ ಯಾವುದೇ ಪಕ್ಷದ ಹಂಗಿಲ್ಲ. ರಾಜೂಗೌಡ ನನ್ನ ಕುಟುಂಬದ ಸದಸ್ಯನಿದ್ದಂತೆ. ಅದಕ್ಕೇ ಪ್ರಚಾರ ನಡೆಸುತ್ತೇನೆ’ ಎಂದು ಕಿಚ್ಚ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಅದೇನೇ ಇರಲಿ, ಸಿಎಂ ಪರ ಕಿಚ್ಚ ಬಾದಾಮಿಯಲ್ಲಿ ಮೇ 9 ರಂದು ಪ್ರಚಾರ ನಡೆಸಲಿದ್ದು, ಅದರತ್ತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.