Select Your Language

Notifications

webdunia
webdunia
webdunia
webdunia

ಈ ಸಾರಿ ಕಪ್ ನಮ್ದೆ ಪಂಚಿಂಗ್ ಡೈಲಾಗ್ ಹೊಡೆದ ಕುಮಾರಸ್ವಾಮಿ

ಈ ಸಾರಿ ಕಪ್ ನಮ್ದೆ ಪಂಚಿಂಗ್ ಡೈಲಾಗ್ ಹೊಡೆದ ಕುಮಾರಸ್ವಾಮಿ
ವಿಜಯಪುರ , ಗುರುವಾರ, 3 ಮೇ 2018 (16:55 IST)
ಈ ಸಾರಿ ಕಫ್ ನಮ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚಿಂಗ್ ಡೈಲಾಗ್ ಹೊಡೆದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
50-50 ಎನ್ನುವ ಮಾತೆ ಇಲ್ಲ. ಈ ಸಲ ಕಫ್ ಜೆಡಿಎಸ್ ಪಾಲಾಗೋದು ಗ್ಯಾರಂಟಿ.ಹೆಚ್ಡಿಕೆ ಅವಕಾಶವಾದಿ ಎನ್ನುವ ಸಿಎಂ ಹೇಳಿಕೆಗೆ ಹೆಚ್‌ಡಿಕೆ ಕೆಂಡಾಮಂಡಲವಾಗಿ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
 
ಕುರುಬರ ಓಟುಗಳನ್ನ ಪಡೆಯೋಕೆ ಬಾದಾಮಿಗೆ ಅರ್ಜಿ ಹಾಕಿದ್ದಾರೆ. ಸಿಎಂ ಸಂಕೋಚಿತ ಮನೋಭಾವದ ವ್ಯಕ್ತಿ. ಅವರಿಂದ ನಾನು ಪಾಠ ಕಲೆಯಬೇಕಿಲ್ಲ.
 
ಜೆಡಿಎಸ್‌ನ ಮುಸ್ಲಿಂ ಮತದಾರರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷವನ್ನ ತಳಕು ಹಾಕುವ ಮೂಲಕ ಮುಸ್ಲಿಂ ಮತಗಳನ್ನ ಒಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಓರ್ವ ಶುದ್ಧ ಸುಳ್ಳು ಬುರುಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಸಿಎಂ ಕೀಳುಮಟ್ಟದ ರಾಜಕೀಯ ಮಾಡ್ತಿದ್ದಾರೆ. ನಾನು ಯಾವತ್ತು ಕೀಳುಮಟ್ಟದ ರಾಜಕೀಯ ಮಾಡಿಲ್ಲ.ಕಾವೇರಿ ತೀರ್ಪು ವಿಚಾರ. ತೀರ್ಪಿನ ಬಗ್ಗೆ ನಾನು ಚರ್ಚೆ ಮಾಡಲು ಹೋಗೋದಿಲ್ಲ. ಕಾವೇರಿ ವಿವಾಧ ಇನ್ನು ಬಗೆ ಹರಿದಿಲ್ಲ. ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ತಾವೇ ಎನೊ ಸಾಧನೆ ಮಾಡಿದಂತೆ ಹೇಳಿಕೊಳ್ತಿತ್ತು. ಕಾವೇರಿ ಹೋರಾಟ ಮುಂದುವರೆಸುತ್ತೇವೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಹೋರಾಟ ಕೈ ಬಿಡುವ ಪ್ರಶ್ನೆ ಇಲ್ಲ ಎಂದರು.
 
ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಕುಮಾರಸ್ವಾಮಿ. ಜೆಡಿಎಸ್ ಪಕ್ಷ ಕಾಂಗ್ರೆಸ್ ಕಡೆಗು ಇಲ್ಲಾ, ಬಿಜೆಪಿ ಕಡೆಗು ಇಲ್ಲಾ. ಜೆಡಿಎಸ್ ಕನ್ನಡಿಗರ ಕಡೆಗಿದೆ.ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಗುಲಾಮನಲ್ಲ ಎಂದು ಟಾಂಗ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಗಳ ಸಾಲ ಮನ್ನಾ ಮಾಡಿದ ಮೋದಿ, ರೈತರ ಸಾಲ ಯಾಕೆ ಮನ್ನಾ ಮಾಡಲ್ಲ: ಸಿಎಂ ಆಕ್ರೋಶ