Publish Date: Wed, 02 May 2018 (16:56 IST)
Updated Date: Wed, 02 May 2018 (16:57 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜೊತೆಗಿನ ಪೋಟೋ ಬಹಿರಂಗಪಡಿಸಿಎಂದು ಕೇಂದ್ರ ಸಚಿವ ಬಿಜೆಪಿ ನಾಯಕ ಅನಂತಕುಮಾರ ಸಿಎಂ ಸಿದ್ದರಾಮಯ್ಯರಿಗೆ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದ ಅನಂತಕುಮಾರ, 24 ಗಂಟೆ ಗಡುವಿನೊಳಗೆ ಅಮಿತ್ ಶಾ ಮತ್ತು ಕುಮಾರಸ್ವಾಮಿ ಜೊತೆಗಿನ ಪೋಟೋ ಬಹಿರಂಗಪಡಿಸಲಿ. 24 ಗಂಟೆಯೊಳಗೆ ಪೋಟೋ ಪ್ರಕಟಪಡಿಸದಿದ್ರೆ ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಕಣದಿಂದ ನಿವೃತ್ತರಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದ ಜನರ ಮುಂದೆ ತಾವು ಸುಳ್ಳು ಹೇಳಿದ್ದನ್ನ ಒಪ್ಪಿಕೊಳ್ಳಬೇಕು. ರಾಜ್ಯದ ಜನತೆ ಸೇರಿದಂತೆ ಅಮಿತ್ ಶಾ ಅವರ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಬಿಜೆಪಿ ನಾಯಕ ಅನಂತಕುಮಾರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.