Publish Date: Wed, 02 May 2018 (15:52 IST)
Updated Date: Wed, 02 May 2018 (15:54 IST)
ದೇಶ ಸಂಪತ್ತನ್ನು ಕೊಳ್ಳೆ ಹೊಡೆದವನನ್ನ ಚಪ್ಪಲಿ ಇಡುವ ಸ್ಥಳ ದಲ್ಲಿ ಬಿಡಬೆಕು. ಸದಾ ಜೈಲಿನಲ್ಲೆ ಕೊಳೆಯ ಬೇಕಿದ್ದವನನ್ನ ಬಿಜೆಪಿ ಚುಣಾವಣೆ ಪ್ರಚಾರಕ್ಕೆ ಬಳಸಿಕೊಳ್ತಿರೊದು ಹಾಸ್ಯಸ್ಪದ. ಇದಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಉತ್ತರ ಕೊಡಬೇಕು ಎಂದು ಸಮಾಜ ಪರಿವರ್ತನ ಸಮುದಾಯ ಮುಖ್ಯಸ್ಥ ಎಸ್.ಆರ್.ಹಿರೇಮಠ್ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಅವರನ್ನ ಸಿಎಂ ಕ್ಯಾಂಡಿಡೆಟ್ ಮಾಡಿದ್ದು ವಾಕರಿಕೆ ಬರುವಂತೆ ಆಗಿದೆ. ರೆಡ್ಡಿ ಇರುವದರಿಂದ 15 ಸ್ಥಾನ ಗೆಲ್ತಿವಿ ಎನ್ನುವ ಯಡಿಯೂರಪ್ಪ ಹೇಳಿಕೆ ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಆರೋಪಿಸಿದ್ದಾರೆ.
ರಾಮುಲು 100 ಕೋಟಿ ಮನೆ ಕಟ್ಟಿದ್ದು ಹೊಲದಲ್ಲಿ ನಟ್ಟು ಕಡೆದು ಅಲ್ಲ. ಆನಂದಸಿಂಘ ಟಿಕೆಟ್ ಕೊಟ್ಟಿದ್ದು ಸಿಎಂ ಸಿದ್ದರಾಮಯ್ಯ ಮಾಡಿದ ಮಹಾ ತಪ್ಪು. ಅಕ್ರಮ ಗಣಿಗಾರಿಕೆಯಲ್ಲಿ ಆನಂದ ಸಿಂಗ್ ಹೆಸರಿದೆ ಎಂದು ಎಸ್.ಆರ್.ಹಿರೇಮಠ್ ಕಿಡಿಕಾರಿದ್ದಾರೆ.