Publish Date: Wed, 02 May 2018 (13:21 IST)
Updated Date: Wed, 02 May 2018 (13:24 IST)
ಸಂಘಪರಿವಾರದ ಚೈತ್ರಾ ಕುಂದಾಪುರ ವಿರುದ್ಧ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಹಿರೇ ಸೂಳಿಕೇರಿ ತಾಂಡಾದಲ್ಲಿ ದುರ್ಗಾದೇವಿಯ ದೇವಸ್ಥಾನದ ಹತ್ತಿರ ಯಾವುದೇ ಪರವಾನಿಗೆ ಇಲ್ಲದೆ, ಎರಡು ಕೋಮುಗಳ ಭಾವನೆ ಕೇರಳಿಸುವಂತೆ ಭಾಷಣ ಮಾಡಿದ ಚೈತ್ರ ಕುಂದಾಪುರ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ವೆಂಕಟೇಶ ಪೂಜಾರ ಮತ್ತು ಶೇಖರ ನಾಯಕ ವಿರುದ್ದ ಪ್ರಕರಣ ದಾಖಲಾಗಿದೆ.
ಗಂಗಾವತಿ ವಿಧಾನ ಸಭಾ ಕ್ಷೇತ್ರದ ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿ ದೂರಿನ ಅನ್ವಯ ಚೈತ್ರಾ ಕುಂದಾಪುರ ಇತರ ಇಬ್ಬರ ಮೇಲೆ ಕಲಂ 171h ,ipc125,Rp 127 ಪ್ರಕರಣ ದಾಖಲಾಗಿದೆ.