Publish Date: Wed, 02 May 2018 (12:43 IST)
Updated Date: Wed, 02 May 2018 (12:44 IST)
ಬೆಂಗಳೂರು: ಬಳ್ಳಾರಿ ಗಣಿ ದಣಿ ಜನಾರ್ಧನ ರೆಡ್ಡಿಗೂ ನಮಗೂ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಸ್ಟಾರ್ ಪ್ರಚಾರಕರಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿ ಮುರಳೀಧರ್ ರಾವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಜನಾರ್ಧನ ರೆಡ್ಡಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಪ್ರಚಾರಕರಾಗಿ ನಾವು ಕರೆದಿಲ್ಲ. ಹಾಗಿದ್ದರೂ ಅವರು ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಸ್ನೇಹಿತರಾಗಿರುವುದರಿಂದ ಪ್ರಚಾರ ಮಾಡುತ್ತಿದ್ದಾರಷ್ಟೆ’ ಎಂದು ಮುರಳೀಧರ್ ರಾವ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.