Publish Date: Wed, 02 May 2018 (13:02 IST)
Updated Date: Wed, 02 May 2018 (13:03 IST)
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗಿದೆ. ಮತ ಕೇಳಲು ಹೋದಾಗ ಬಿಜೆಪಿ ಕಾರ್ಯಕರ್ತರಿಂದಲೇ ಸಖತ್ ಕ್ಲಾಸ್ ನಡೆದಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಡಗದಾಳ್ ಗ್ರಾಮದಲ್ಲಿ ಘಟನೆ ನಡೆದಿದೆ. ಆರ್ ಎಸ್ ಎಸ್ ಬಗ್ಗೆ ಉಡಾಫೆ ವರ್ತನೆ ತೋರುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸಂಘಟನೆಯಿಂದಲೇ ಅಧಿಕಾರ ಪಡೆದು ಆರ್ ಎಸ್ ಎಸ್ ಗೆ ಅಗೌರವ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಬಿಜೆಪಿ ಕಾರ್ಯಕರ್ತನ ಪ್ರಶ್ನೆಗೆ ಕೆರಳಿದ ಶಾಸಕ ಅಪ್ಪಚ್ಚು ರಂಜನ್, ಕುಳಿತ ಸ್ಥಳದಿಂದ ಎದ್ದು ಬಂದು ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ. ಬಾಯಿಗೆ ಬಂದಂಗೆ ಮಾತಾಡಬೇಡ, ನನ್ನನ್ನ ಕೆರಳಿಸಬೇಡ ಎಂದ ಶಾಸಕ ಹೇಳಿದ್ದಾರೆ.
ನಾನು ಗಂಡು ಮಗನೇ ಅಂತಾ ಕೈ ತಟ್ಟಿ ಅಬ್ಬರಿಸಿದ ಅಪ್ಪಚ್ಚು ರಂಜನ್ ನೋಡಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.
ಹಾಲಿ ಬಿಜೆಪಿ ಅಭ್ಯರ್ಥಿಯೂ ಆಗಿರೋ ಅಪ್ಪಚ್ಚು ರಂಜನ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂತಹ ಶಾಸಕ ಪುನಃ ಆಯ್ಕೆಯಾಗಬೇಕಾ ಅನ್ನೋದು ಕಾರ್ಯಕರ್ತರಲ್ಲಿ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ.