Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸಮಾವೇಶ ವೇದಿಕೆ ಬಳಿ ದಿಢೀರ್ ಬೆಂಕಿ

ಕಾಂಗ್ರೆಸ್ ಸಮಾವೇಶ ವೇದಿಕೆ ಬಳಿ ದಿಢೀರ್ ಬೆಂಕಿ
ಕಲಬುರಗಿ , ಬುಧವಾರ, 2 ಮೇ 2018 (12:58 IST)
ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾಂಗ್ರೆಸ್ ಸಮಾವೇಶದ ವೇದಿಕೆ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. 
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಬಿ.ಆರ್.ಪಾಟೀಲ ಪರ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಸಿಎಂ ಭಾಗವಹಿಸಿದ್ದರು. 
 
ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಇಬ್ರಾಹಿಂ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ಭಾಷಣ ಮುಗಿಸಿ ಸಿಎಂ ವೇದಿಕೆಯಿಂದ ಕೆಳಗಿಳಿದು ಕಾರ್ ಹತ್ತಿ ಹೋದ ಕೆಲ ನಿಮಿಷಗಳಲ್ಲಿಯೇ ವೇದಿಕೆ ಪಕ್ಕ ಬೃಹತ್ ಆಕಾರದಲ್ಲಿ ಬೆಂಕಿ ಕಾಣಿಸಲಾರಂಭಿಸಿತು. 
 
ಕಾಂಗ್ರೆಸ್ ಸಮಾವೇಶಕ್ಕಾಗಿ ಹಾಕಿದ್ದ ಶಾಮಿಯಾನ ಪಕ್ಕದಲ್ಲಿದ್ದ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ರು. ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಕೆಲಕಾಲ ಗಲಿಬಿಲಿ ಹಾಗೂ ಆತಂಕಕ್ಕೆ ಒಳಗಾದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿಗೂ ನಮಗೂ ಸಂಬಂಧವಿಲ್ಲ: ಬಿಜೆಪಿ ಸ್ಪಷ್ಟನೆ