ಸಂಸದ ಸುರೇಶ ಅಂಗಡಿ ಅವರು ಗ್ರಾಮೀಣ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತೆ ಒಟ್ಟು ಇಪ್ಪತ್ತೆಳು ಅಂಶಗಳೊಂದಿಗೆ ತಯಾರಿಸಲಾದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಸರಕು ಸಾಗಾಣಿಕೆ ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು, ತಾಲೂಕಿಗೊಂದು ಸೋಲಾರ ಹಬ್ ನಿರ್ಮಾಣ, ಜಿಲ್ಲೆಯಲ್ಲಿ ಬೆಲ್ಲ ಸಂಶೋಧನಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಕಳಸಾ ಬಂಡೂರಿ ಮತ್ತು ಮಹಾದಾಯಿ ಮಲಪ್ರಭಾ ಜೋಡಣೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ತಾಲೂಕಿಗೊಂದು ಹಣ್ಣು ಮತ್ತು ತರಕಾರಿ ಸಂಗ್ರಹಕ್ಕೆ ಶೀತಲಗೃಹಗಳ ನಿರ್ಮಾಣ, ಹಾಗೂ ಸ್ಪೆಷಲ್ ಎಕನಾಮಿಕ್ ಮತ್ತು ಇಂಡಸ್ಟ್ರೀಯಲ್ ಜೋನ್ ಸ್ಥಾಪನೆ, ಕೌಶಲ್ಯ ಉನ್ನತಿ ಕೇಂದ್ರ ಸ್ಥಾಪನೆ, ಗೋಶಾಲೆಗಳ ನಿರ್ಮಾಣ, ಸೇರಿದಂತೆ ನಗರದಲ್ಲಿ ರಿಂಗ ರೋಡ್ ನಿರ್ಮಾಣ ಹಾಗೂ ಬೆಳಗಾವಿ ಧಾರವಾಡ ಕಿತ್ತೂರ ಮಾರ್ಗವಾಗಿ ಜೋಡುರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸುವ ಬಗ್ಗೆ ಪ್ರಮುಖ ಅಂಶಗಳು ಚುನಾವಣಾ ಪ್ರಣಾಳಿಕೆ ಪಟ್ಟಿಯಲ್ಲಿ ಪ್ರಮುಖ ಅಂಶಗಳು ಅಳವಡಿಸಲಾಗಿದೆ.
ಇನ್ನು ಬೆಳಗಾವಿ ನಗರಕ್ಕೆ ಸೊಲಾರ ಮೂಲಕ 24x7 ವಿದ್ಯುತ್, ನೀರು ಸರಬರಾಜು ಪೂರೈಕೆಗೆ ಒತ್ತು ನೀಡಿ ಪ್ಲಾಸ್ಟಿಕ್ ರಹಿತ ನಗರ ನಿರ್ಮಾಣಕ್ಕೆ ಆದ್ಯತೆ ನೀಡುವ ಅಂಶಗಳು ಒಳಗೊಂಡಿವೆ.