Select Your Language

Notifications

webdunia
webdunia
webdunia
webdunia

ಜೀವಬೆದರಿಕೆಯಿಂದಾಗಿ ಕೃಷ್ಣಮಠಕ್ಕೆ ಮೋದಿ ಭೇಟಿಯಿಲ್ಲ: ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ
ಉಡುಪಿ , ಬುಧವಾರ, 2 ಮೇ 2018 (15:46 IST)
ಜೀವ ಬೆದರಿಕೆ ಇರುವ ಕಾರಣ ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ ಎಂಬ ಸಂಸದೆ ಶೋಭಾ ಕರದ್ಲಾಂಜೆ ಅವರ ಹೇಳಿಕೆಗೆ ಮಠದ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ.
ಮಠದ ಆಡಳಿತ ಆಧಿಕಾರಿ ವೆಂಕಟರಮಣ ಆಚಾರ್ಯ ಅವರು ಈ ಬಗ್ಗೆ ಮಠದಲ್ಲಿ ಪ್ರತಿಕ್ರಿಯಿಸಿ ಮಾತನಾಡಿದ್ರು ಮೋದಿ ಮಠಕ್ಕೆ ಬರುವ ನಿರೀಕ್ಷೆಯ ಹಿನ್ನಲೆಯಲ್ಲಿ ಮಠದ ಸುತ್ತಾ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿತ್ತು.
 
 ಭದ್ರತೆಯಲ್ಲಿ ಯಾವುದೇ ಲೋಪದೋಷ ಇರಲಿಲ್ಲ. 10 ಗಂಟೆಯ ಮುಂಚೆಯೇ ಎಲ್ಲಾ ಪೂಜಾ ಕಾರ್ಯಗಳನ್ನು ಮುಗಿಸಲಾಗಿತ್ತು. ಶ್ರೀ ಕೃಷ್ಣ ಮಠದ ಸುತ್ತಾ ಮುತ್ತಾ ಪೋಲಿಸ್ ಇಲಾಖೆ ಕೂಡಾ ಹೆಚ್ಚಿನ ಪರಿಶೀಲನೆ ನಡೆಸಿತ್ತು.
 
 ಪ್ರಧಾನಿ ಮೋದಿ ಅನಾನುಕೂಲತೆಯಿಂದ ಮಠಕ್ಕೆ ಭೇಟಿ ನೀಡಿಲ್ಲ ಹೊರತು ಅನ್ಯ ಕಾರಣ ಇಲ್ಲ. ಮುಂದಿನ ಬಾರೀ ಜಿಲ್ಲೆಗೆ ಬೇಟಿ ನೀಡಿದ ಸಂದರ್ಭ ಶ್ರೀ ಕೃಷ್ಣ ಮಠಕ್ಕೆ ಬರುವ ಭರವಸೆಯನ್ನು ಮೋದಿ ವ್ಯಕ್ತ ಪಡಿಸಿದ್ದಾರೆ ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಹಿಗ್ಗಾಮುಗ್ಗಾ ವಾಗ್ದಾಳಿ