Select Your Language

Notifications

webdunia
webdunia
webdunia
webdunia

‘ಭರತ್​ ಅನೆ ನೇನು’ ಚಿತ್ರದ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ ನಟಿ ಶ್ರೀರೆಡ್ಡಿ

‘ಭರತ್​ ಅನೆ ನೇನು’ ಚಿತ್ರದ ಬಗ್ಗೆ ವಿವಾದಾತ್ಮಕವಾಗಿ  ಟ್ವೀಟ್ ಮಾಡಿದ ನಟಿ ಶ್ರೀರೆಡ್ಡಿ
ಹೈದರಾಬಾದ್ , ಭಾನುವಾರ, 6 ಮೇ 2018 (07:48 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ಅರೆಬೆತ್ತಲೆ ಪ್ರತಿಭಟನೆ ಮಾಡಿ ವಿವಾದ ಸೃಷ್ಟಿಸಿದ ತೆಲುಗು ನಟಿ ಶ್ರೀರೆಡ್ಡಿ ಇದೀಗ ಫ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಭರತ್​ ಅನೆ ನೇನು’ ಚಿತ್ರದ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.


ಶ್ರೀರೆಡ್ಡಿ ಮಹೇಶ್​​ ಬಾಬು ಅಭಿನಯದ  ಭರತ್​ ಅನೆ ನೇನು’ ಚಿತ್ರದ ಬಗ್ಗೆ ತೆಲುಗಿನಲ್ಲಿ ಟ್ವೀಟ್​ ಮಾಡಿದ್ದು, ಮಹೇಶ್​​ಬಾಬು ಸ್ಟಾರ್ ​ಡಮ್​ನಿಂದಾಗಿ ಈ ಸಾಧಾರಣ ಸಿನಿಮಾ ದೊಡ್ಡ ಹಿಟ್​ ಆಗಿದೆ. ಅಲ್ಲದೆ, ಸಿನಿಮಾ ನಿರ್ದೇಶಕ ಕೊರಟಾಲ ಶಿವ ಅವರದ್ದು ಅತ್ಯಂತ ಕಳಪೆ ನಿರ್ದೇಶನ, ಕಥೆಯಲ್ಲಿ ಸಾರವೇ ಇಲ್ಲ. ಮಹೇಶ್​ ಬಾಬು ಅವರನ್ನ ಭಾವನೆಗಳೇ ಇಲ್ಲದ ನಟನಾಗಿ ಮಾಡಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಹಾಗೇ ಕೊರಟಾಲ ಶಿವ ಅವರು ಕಾಸ್ಟಿಂಗ್​ ಕೌಚ್​ನಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಶ್ರೀರೆಡ್ಡಿ ಆರೋಪ ಮಾಡಿದ್ದಾರೆ. ನಂತರ ಈ ಟ್ವೀಟ್ ಅನ್ನು ಡಿಲೀಟ್​ ಮಾಡಿದ್ದರೂ ಕೂಡ ಅದು ಆಗಲೇ ವೈರಲ್ ಆಗಿತ್ತು.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರಿಯಾಂಕ ಚೋಪ್ರಾರ ಸ್ಟೈಲಿಶ್ ಡ್ರೆಸ್ ನೋಡಿ ಟ್ರೋಲ್ ಮಾಡಿದ ಅಭಿಮಾನಿಗಳು